ಮಂಗಳೂರು: ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ, ದ.ಕ ಜಿಲ್ಲೆಯ 10ವಿದ್ಯಾರ್ಥಿಗಳು ಆಯ್ಕೆ

ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಬೀದರ್‌ನ ಜಿಲ್ಲಾ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ೨೦೨೩-೨೪ನೇ ಸಾಲಿನ ೧೯ ವರ್ಷದೊಳಗಿನ ಬಾಲಕ – ಬಾಲಕಿಯರ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ದ.ಕ ಜಿಲ್ಲೆಯ10ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಈ ಪಂದ್ಯಾವಳಿಯು ನ.21 ಮತ್ತು ನ.22 ರಂದು ನಡೆಯಲಿದ್ದು, ಮಂಗಳೂರಿನ ಸಂತ ಆಗ್ನೆಸ್ ಪಿಯು ಕಾಲೇಜಿನ ನಹ್ಲಾ ಫಾತಿಮಾ, ಸಂತ ಅಲೋಶಿಯಸ್ ಪಿಯು ಕಾಲೇಜಿನ ಆರ್ಣ ಸದೋರ್ತ, ಬಂಟ್ವಾಳದ ಕಾರ್ಮೆಲ್ ಕಂಪೊಸೈಟ್ ಪಿಯು ಕಾಲೇಜಿನ ರಿಷಿಕಾ ಎ ಎಸ್,

ಮೂಡುಬಿದಿರೆ ಎಕ್ಸಲೆಂಟ್ ಪಿಯು ಕಾಲೇಜಿನ ಶ್ರಾವ್ಯ ಡೋಂಗ್ರೆ, ಪುತ್ತೂರು ವಿವೇಕಾನಂದ ಪಿಯು ಕಾಲೇಜಿನ ಪೂರ್ವಿ ಎಂ ಎಸ್,
ಮಂಗಳೂರಿನ ಶ್ರೀ ಚೈತನ್ಯ ಪಿಯು ಕಾಲೇಜಿನ ಪೃಥ್ವಿ ಪಿ ಕರದಾಲಿ ಹಾಗೂ ಮಂಜುನಾಥ್ ಎ.ಎಸ್, ಮೂಡುಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜಿನ ಪ್ರಧಾನ್ ಎಂ, ಸುರತ್ಕಲ್ ಗೋವಿಂದ್ ದಾಸ್ ಪಿಯು ಕಾಲೇಜಿನ ಆದಿತ್ಯ ಎಸ್.ಎಂ, ಪುತ್ತೂರು ಸಂತ ಫಿಲೋಮಿನಾ ಪಿಯು ಕಾಲೇಜಿನ ಕೆ ಎಸ್ ಶಹದುದ್ದಿನ್ ಅವರು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಸುರತ್ಕಲ್ ಗೋವಿಂದ ದಾಸ್ ಕಾಲೇಜಿನ ದೈಹಿಕ ಶಿಕ್ಷಕರಾದ ನಿಕಿಲ್ ಭೂಷಣ್ ಅವರು ಈ ಕ್ರೀಡಾಪಟುಗಳಿಗೆ ತರಬೇತಿಯನ್ನು ನೀಡಿದ್ದಾರೆ.

Related Posts

Leave a Reply

Your email address will not be published.