ಮಂಗಳೂರು: ಮಂಗಳೂರು ಪಾಲಿಕೆಯಲ್ಲಿ ಮೇಯರ್ ಫೋನ್-ಇನ್ ಕಾರ್ಯಕ್ರಮ: ಹಲವಾರು ಸಮಸ್ಯೆಗಳನ್ನು ಮೇಯರ್ ಗಮನಕ್ಕೆ ತಂದ ಸಾರ್ವಜನಿಕರು

ಮಂಗಳೂರು ಪಾಲಿಕೆ ವ್ಯಾಪ್ತಿಯ 66 ತಳ್ಳುಗಾಡಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ನಿರ್ಧರಿಸಿದ್ದು, ನ. 1ರಂದು ವಿತರಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.

ಮಂಗಳೂರು ಪಾಲಿಕೆಯಲ್ಲಿ ನಡೆದ ಸಾರ್ವಜನಿಕ ಫೆÇೀನ್-ಇನ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಮೇಯರ್ ಅವರು, ಒಟ್ಟಾರೆ ಸುಮಾರು 900 ಅರ್ಜಿಗಳು ಬಂದಿದ್ದು, ಮೊದಲ ಹಂತದಲ್ಲಿ ಹೊಸತಾಗಿ 66 ಮಂದಿಗೆ ಗುರುತಿನ ಚೀಟಿ ನೀಡುತ್ತೇವೆ. ತಳ್ಳುಗಾಡಿ ಗುರುತಿನ ಚೀಟಿ ಹೊಂದಿದವರು ನಿಂತು ವ್ಯಾಪಾರ ಮಾಡುವಂತಿಲ್ಲ, ಅವರಿಗೆ ನಿರ್ದಿಷ್ಟ ಜನವಸತಿ ಪ್ರದೇಶವನ್ನು ನಿಗದಿಪಡಿಸುತ್ತೇವೆ. ಆ ವಿವರಗಳು ಅವರ ಗುರುತಿನ ಚೀಟಿಯಲ್ಲಿ ಇರಲಿದೆ ಎಂದು ತಿಳಿಸಿದರು.

ನಗರದಲ್ಲಿ ಅನಧಿಕೃತ ಪ್ಲಾಸ್ಟಿಕ್ ಮಾರಾಟ ಮಾಡುವ ಮಳಿಗೆಗಳ ಮೇಲೆ ನಿಗಾ ಇಡಲಾಗುವುದು. ಪಾಲಿಕೆಯಿಂದ ಪ್ರತ್ಯೇಕ ತಂಡ ರಚಿಸಿ ದಾಳಿ ನಡೆಸಲಾಗುವುದು. ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ವಿವಿಧ ಭಾಗದಿಂದ ಪ್ರಕರಣ ಬರುತ್ತಿದೆ. ಸಂತಾನಶಕ್ತಿ ಹರಣ ಚಿಕಿತ್ಸೆಯೂ ನಡೆಯುತ್ತಿದೆ ಎಂದು ಮೇಯರ್ ಹೇಳಿದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿರುವ ಹಲವಾರು ಸಮಸ್ಯೆಗಳನ್ನು ಮೇಯರ್ ಗಮನಕ್ಕೆ ತಂದರು. ಮೇಯರ್ ಅವರು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಾಯೀ ಸಮಿತಿಗಳ ಅಧ್ಯಕ್ಷರು, ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.