Mangaluru ; ಪಂಚಾಯತ್ ಮಟ್ಟದ ಪುಸ್ತಕ ದಾಖಲೆ ಇಡುವವರಿಂದ ಪ್ರತಿಭಟನೆ
ಮಂಗಳೂರಿನ ಗಡಿಯಾರ ಗೋಪುರದ ಎದುರು ಪಂಚಾಯತ್ ಮಟ್ಟದ ಬುಕ್ ಕೀಪಿಂಗ್ ಕೆಲಸ ಮಾಡುವ ಮಹಿಳೆಯರು ಸಿಪಿಎಂ ಸಂಘಟನೆಯ ಮೂಲಕ ಪ್ರತಿಭಟನೆ ಮಾಡಿದರು. ಸಿಪಿಎಂ ನಾಯಕ ಸುನಿಲ್ ಕುಮಾರ್ ಬಜಾಲ್ ಅವರು ಹೋರಾಟದ ಅಗತ್ಯದ ಬಗೆಗೆ ಮಾತನಾಡಿದರು.
ಬುಕ್ ಕೀಪಿಂಗ್ ಮಹಿಳೆಯರಿಗೆ ಪಂಚಾಯತ್ ಮಟ್ಟದಿಂದ ಮೂರರಿಂದ ಐದು ಸಾವಿರ ಮಾತ್ರ ಸಂಬಳ ಕೊಡುತ್ತಿದ್ದಾರೆ. ಇದು ಕೆಲವರ ಸಾರಿಗೆ ವೆಚ್ಚ ಕೂಡ ಆಗುವುದಿಲ್ಲ. ಕನಿಷ್ಠ ಹತ್ತು ಸಾವಿರ ಸಂಬಳ ಕೊಡತಕ್ಕದ್ದು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.
ಅದಕ್ಕಿಂತ ಮುಖ್ಯವಾಗಿ ದುಡಿಮೆಗೆ ತಕ್ಕ ಸಂಬಳ ಮಾತ್ರವಲ್ಲ. ಕೆಲಸದ ಕಾಯಮಾತಿ ಅತ್ಯಗತ್ಯ. ಆದರೆ ಸರಕಾರದ ಸಣ್ಣ ಕೆಲಸಗಳನ್ನು ಕೂಡ ಕಾಸಗಿಗೆ ವಹಿಸುವ, ಹುದ್ದೆಗಳನ್ನೇ ರದ್ದು ಪಡಿಸುವ ಹುನ್ನಾರ ನಡಯುತ್ತಿದೆ. ನಮಗೆ ನ್ಯಾಯ ಬೇಕು ಎಂದು ಅವರೆಲ್ಲ ಕೂಗಿ ಹೇಳಿದರು.