ಮಂಗಳೂರು: ಡಾ.ಟಿ.ಎಂ.ಎ. ಪೈ ಸೆಂಟರ್ ನಲ್ಲಿ ರ್‍ಯಾಂಬೋ ಸರ್ಕಸ್‍ಗೆ ಚಾಲನೆ
ಮಂಗಳೂರಿನಲ್ಲಿ ರ್‍ಯಾಂಬೋ ಸರ್ಕಸ್ ಆರಂಭವಾಗಿದ್ದು, ನಗರದ ಡಾ.ಟಿ.ಎಂ.ಎ. ಪೈ ಸೆಂಟರ್ ನಲ್ಲಿ ಆರಂಭಗೊಂಡಿದೆ. ಹವಾನಿಯಂತ್ರಿತ ಆಡಿಟೋರಿಯಮ್‍ನಲ್ಲಿ ಮೊದಲ ಬಾರಿಗೆ ಸರ್ಕಸ್ ಪ್ರದರ್ಶನಗೊಳ್ಳುತ್ತಿದ್ದು, ಸೆ.24ರ ತನಕ ರ್‍ಯಾಂಬೋ ಸರ್ಕಸ್‍ನ ಬೆರಗುಗೊಳಿಸುವ ಪ್ರದರ್ಶನ ಇರಲಿದೆ.
ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಸರ್ಕಸ್‍ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಂಗಳೂರಿನಲ್ಲಿ ಮೊದಲ ಬಾರಿಗೆ ಹವಾನಿಯಂತ್ರಿತ ಸಭಾಂಗಣದಲ್ಲಿ ಸರ್ಕಸ್ ಪ್ರದರ್ಶನ ಆಯೋಜಿಸಿದ್ದು ಶ್ಲಾಘನೀಯ. ಈ ಅಪರೂಪದ ಕಲೆಯನ್ನು ಹೆಚ್ಚಿನ ಜನರು ಪ್ರೋತ್ಸಾಹಿಸಿ ಎಂದು ಹೇಳಿದರು.
ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಮಾತನಾಡಿ, 32 ವರ್ಷ ಇತಿಹಾಸ ಇರುವ ಸರ್ಕಸ್ ಈಗ ಒಳಾಂಗಣ ಸಭಾಗೃಹದಲ್ಲಿ ಪ್ರದರ್ಶನ ನೀಡಲು ಮುಂದಾಗಿದೆ. ಯಾವುದೇ ಪ್ರಾಣಿಗಳನ್ನು ಬಳಸದೆ ಕೇಲವ 60ಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ಹಲವು ರೀತಿಯ ಕಸರತ್ತುಗೊಳೊಂದಿಗೆ ಮನರಂಜಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಪಾಲಿಕೆಯ ಕಾರ್ಪೋರೇಟರ್ ಶಶಿಕಲಾ ಕಾವ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ರ್‍ಯಾಂಬೋ ಸರ್ಕಸ್‍ನ ಎಚಿಡಿ ಸುಜಿತ್ ದಿಲೀಪ್, ಉದ್ಯಮಿ ವಸಂತ ಪೂಜಾರಿ, ನಿಸರ್ಗ ಪಬ್ಲಿಸಿಟಿಯ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ರಾಂಬೋ ಸರ್ಕಸ್ ಮೊದಲ ದಿನ 2 ಪ್ರದರ್ಶನ, ಸೆ.22ರಂದು 3, ಸೆ. 23 ಮತ್ತು 24ರಂದು 4 ಪ್ರದರ್ಶಗಳಿರುತ್ತದೆ.