ಎರ್ಮಾಳು ಗ್ರಾಮ ದೈವಸ್ಥಾನದಲ್ಲಿ ವಾರ್ಷಿಕ ಹೂವಿನ ಪೂಜೆ
ಗ್ರಾಮ ದೈವಸ್ಥಾನವಾದ ಎರ್ಮಾಳು ನಡಿಯಾಳು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ವಾರ್ಷಿಕ ಹೂವಿನ ಪೂಜೆಯು ಬಹಳ ವಿಜೃಂಬಣೆಯಿಂದ ನಡೆಯಿತು.
ದೈವಸ್ಥಾನ ಸಮಿತಿಯ ಅಧ್ಯಕ್ಷ ಬಾಲಚಂದ್ರ ಪೂಜಾರಿ ಅವರ ನೇತೃತ್ವದಲ್ಲಿ ಸಮಿತಿ ಪಧಾದಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ನಡೆಯಿತು. ದರ್ಶನ ಸೇವೆಯಲ್ಲಿ ಭಕ್ತಾಧಿಗಳು ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೈವದಲ್ಲಿ ಹರಿಕೆ ಮಾಡಿಕೊಂಡು, ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಂಡು ಧನ್ಯತಾ ಬಾವದಿಂದ ಮರಳಿದ್ದಾರೆ.
ಈ ಸಂದರ್ಭ ಗ್ರಾಮದ ನೂರಾರು ಮಂದಿ ಪ್ರಮುಖರು ಸೇವಾ ಅವಧಿಯಲ್ಲಿ ಹಾಜರಿದ್ದು ದೈವದ ಕೃಪೆಗೆ ಪಾತ್ರರಾಗಿದ್ದಾರೆ.