ಮಂಗಳೂರು: ಕಂಕನಾಡಿಯ ವೆಸ್ಟ್‌ಕೋಸ್ಟ್ ಶೋರೂಂನಲ್ಲಿ ಕರೀಷ್ಮ ಎಕ್ಸ್‌ಎಂಆರ್ ದ್ವಿಚಕ್ರ ವಾಹನ ಬಿಡುಗಡೆ
ಹೊಸ ಹೊಸ ಮಾದರಿಯ ದ್ವಿಚಕ್ರವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಪ್ರತಿಷ್ಠಿತ ವೆಸ್ಟ್ ಕೋಸ್ಟ್ ಮೋಟಾರ್‍ಸ್, ಇದೀಗ ಕರೀಷ್ಮ ಎಕ್ಸ್‌ಎಂಆರ್ ದ್ವಿಚಕ್ರ ವಾಹನವನ್ನು ಕಂಕನಾಡಿಯ ವೆಸ್ಟ್ ಕೋಸ್ಟ್ ಶೋರೂಂನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಕರೀಷ್ಮಾ ೨೧೦ಸಿಸಿಯ ದ್ವಿಚಕ್ರ ವಾಹನವನ್ನು ನಟರಾದ ಅರ್ಜುನ್ ಕಾಪಿಕಾಡ್ ಮತ್ತು ಅನೂಪ್ ಸಾಗರ್‌ರವರು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ನಟ ಅರ್ಜುನ್ ಕಾಪಿಕಾಡ್ ಅವರು, ಮಾತನಾಡಿ, ಈ ಬೈಕ್ ನೋಡಿ ನನ್ನ ಕಾಲೇಜ್ ಡೇಸ್ ನೆನಪಾಗುತ್ತಿದೆ. ನಾವೆಲ್ಲರೂ ಬೈಕ್‌ನಲ್ಲೇ ಕಾಲೇಜ್ ಬಂಕ್ ಮಾಡಿ ಸುತ್ತಾಡುತ್ತಿದ್ದೇವು ಎಂದು ತಮ್ಮ ಹಳೆಯ ನೆನಪನ್ನು ಹಂಚಿಕೊಂಡು.. ರಾಪಟ ಸಿನಿಮಾ ಬಿಡುಗಡೆಗೊಂಡಿದ್ದು, ಎಲ್ಲರೂ ಸಿನಿಮಾ ನೋಡಿ ಎಂದು ಹೇಳಿದರು.
ನಟ ಅನೂಪ್ ಸಾಗರ್ ಅವರು ಮಾತನಾಡಿ, ವೆಸ್ಟ್‌ಕೋಸ್ಟ್ ಟೀಮ್‌ಗೆ ಶುಭಾಷಯ ತಿಳಿಸಿದ ಅವರು, ಬೈಕ್ ನನಗೆ ತುಂಬಾ ಇಷ್ಟವಾಯಿತು. ಯಾಕೆಂದರೆ ನನ್ನ ಫೇವರೆಟ್ ಬಣ್ಣವು ಕೆಂಪು ಎಂದ ಅವರು, ನಂತರ ಎಲ್ಲರೂ ರಾಪಟ ಚಿತ್ರವನ್ನು ನೋಡಿ ತುಳು ಸಿನಿಮಾವನ್ನು ಗೆಲ್ಲಿಸಿ ಎಂದರು.
ಈ ಸಂದರ್ಭದಲ್ಲಿ ವೆಸ್ಟ್‌ಕೋಸ್ಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಇಸ್ಮಾಯಿಲ್‌ರವರು ಮಾತನಾಡಿ, ಒಂದು ಶೋರೂಂ ಅನ್ನು ರಿನೊವೇಶನ್ ಮಾಡದಿದ್ದರೆ ಜನ ಬರುವುದಿಲ್ಲ. ಅದಕ್ಕಾಗಿ ನಾವು ಶೋರೂಂ ಅನ್ನು ರಿನೊವೇಶನ್ ಮಾಡಿದ್ದೇವೆ. ಹೀರೋ ವೆಸ್ಟ್ ಕೋಸ್ಟ್ ಮೋಟರ್‍ಸ್‌ನಲ್ಲಿ ಸರ್ವಿಸ್, ಸ್ಪೇರ್ ಪಾರ್ಟ್ಸ್ ಒಂದೆ ಕಡೆ ಸಿಗುವುದರಿಂದ ಬೇರೆ ಕಡೆ ಹೋಗುವ ಅವಶ್ಯಕತೆ ಇರುವುದಿಲ್ಲ ಎಂದರು.
ವೆಸ್ಟ್‌ಕೋಸ್ಟನ ಮ್ಯಾನೇಜಿಂಗ್ ಡೈರೆಕ್ಟರ್ ಮಹಮ್ಮದ್ ರಫೀಕ್‌ರವರು ಮಾತನಾಡಿ, ವೆಸ್ಟ್‌ಕೋಸ್ಟ್‌ನಲ್ಲಿ ಆತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ. ಇದೀಗ ಕರೀಷ್ಮ ಎಕ್ಸ್‌ಎಂಆರ್ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ನೋಡಲು ಅತ್ಯಾಕರ್ಷಕವಾಗಿದ್ದು, ನಿಮ್ಮಿಷ್ಟದ ಬೈಕ್‌ನ್ನು ಖರೀದಿಸಬಹುದು ಎಂದರು.
ಈ ಸಂದರ್ಭ ಗ್ರಾಹಕರಾದ ಸುಜಿತ್, ಕಿರಣ್ ಅವರಿಗೆ ಕರೀಷ್ಮಾ ಬೈಕ್‌ನ ಕೀಯನ್ನು ಹಸ್ತಾಂತರಿಸಲಾಯಿತು. ನಂತರ ನೆರೆದಿದ್ದ ಎಲ್ಲರಿಗೂ ಸ್ಮರಣಿಕೆಯನ್ನು ನೀಡುವುದರ ಮೂಲಕ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂದೀಪ್ ಶೆಟ್ಟಿ, ಸಂತೋಷ್ ಆಚಾರ್ಯ ಹಾಗೂ ರಾಪಟ ಚಿತ್ರತಂಡ ಕಲಾವಿದರು, ಹಾಗೂ ವೆಸ್ಟ್‌ಕೋಸ್ಟ್ ಶೋರೂಂನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.