ಮಂಜೇಶ್ವರ: ರಸ್ತೆ ದುರಸ್ತಿಗಾಗಿ ಹಣ ಸಂಗ್ರಹಿಸುವ ಮೂಲಕ ವಿನೂತನ ಪ್ರತಿಭಟನೆ

ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಹಾಗೂ 8 ವಾರ್ಡುಗಳಲ್ಲಿರುವ ಮಂಜೇಶ್ವರ ರಾಗಂ ಜಂಕ್ಷನ್‍ನಿಂದ ಸಿರಾಜುಲ್ ಹುದಾ ಶಾಲೆಯಲ್ಲಿಂದ ರಸ್ತೆ ಸಂಪೂರ್ಣ ಹದಗೆಟ್ಟಿದು,್ದ ಕಳೆದ 15 ವರ್ಷಗಳಿಂದ ಜನಪ್ರತಿನಿಧಿಗಳಾಗಲೀ ಅಧಿಕಾರಿಗಳಾಗಲೀ ಇತ್ತ ಕಡೆ ತಿರುಗಿಯೂ ನೋಡದೆ ಇರುವುದು ಭಾರೀ ಪ್ರತಿಭಟನೆಗೆ ಕಾರಣವಾಗಿದೆ.

ಮಳೆ ಸ್ವಲ್ಪ ಸುರಿದರೆ ಸಾಕು.. ರಸ್ತೆ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ವಾಹನ ಸವಾರರ ಜೀವನಕ್ಕೂ ಸಂಚಾಕಾರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕರು ಹಾಗೂ ಊರವರು ಅಲ್ಪ ಕಾಲ ವಾಹನಗಳ ಸಂಚಾರ ತಡೆದು ಪ್ರತಿಭಟಿಸಿದರು. ರಸ್ತೆ ಸಂಪೂರ್ಣ ಹದಗೆಟ್ಟು ಬೃಹತಾಕಾರದ ಗುಂಡಿಗಳು ಪ್ರತ್ಯಕ್ಷಗೊಂಡಿದೆ. ಮಳೆ ಬರುವಾಗ ನೀರು ಕೂಡ ನಿಂತುಕೊಳ್ಳುವ ಪರಿಣಾಮ ವಾಹನ ಸವಾರರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.

ಇಲ್ಲಿನ ಗ್ರಾಮಸ್ಥರು ನಿತ್ಯ ಈ ಹದೆಗೆಟ್ಟ ರಸ್ತೆಯ ಮೇಲೆ ಜೀವ ಭಯದಿಂದ ಸಂಚರಿಸುವುದು ಅನಿವಾರ್ಯವಾಗಿದೆ. ರಸ್ತೆ ದುರಸ್ತಿ ಕಾಣದೇ ವರ್ಷಗಳೇ ಕಳೆÀದಿವೆ. ನೂರಾರು ವಾಹನಗಳು ಈ ರಸ್ತೆಯ ಮೇಲೆ ನಿತ್ಯ ಸಂಚಾರ ಮಾಡುತ್ತಿವೆ. ನಾಲ್ಕು ಚಕ್ರ ವಾಹನಗಳು ಈ ರಸ್ತೆಗೆ ಬಂದರೆ ನಡುವೆ ವಾಹನ ಕೈ ಕೊಡುವುದು ಗ್ಯಾರಂಟಿ. ಕೆಲವೊಂದು ಬಾರಿ ಕೆಟ್ಟು ನಿಂತಿವೆ. ಇದರ ನಡುವೆ ಬೈಕ್ ಸವಾರರ ಸ್ಥಿತಿ ದಯನೀಯವಾಗಿದೆ.

ಸಾಕಷ್ಟು ಪ್ರಮಾಣದಲ್ಲಿ ಗುಂಡಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ವಾಹನ ಚಲಾಯಿಸುವಾಗ ಆಯ ತಪ್ಪಿ ಬಿಳುತ್ತಿರುವದು ಸಾಮಾನ್ಯವಾಗಿ ಬಿಟ್ಟಿದೆ. ಆದರೂ ಕೂಡ ಸಂಬಂಧಿಸಿದ ಅಧಿಕಾರಿಗಳು ಈ ಹದೆಗೆಟ್ಟ ರಸ್ತೆ ದುರಸ್ತಿಗೆ ಮುಂದಾಗಿರುವುದರ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಿ ಗ್ರಾಮಸ್ಥರಿಗೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯ ತೀವೃತೆಯನ್ನು ಹೆಚ್ಚಿಸುವುದಾಗಿ ಆಟೋ ಚಾಲಕರು ಹಾಗೂ ಊರವರು ಎಚ್ಚರಿಕೆ ನೀಡಿದ್ದಾರೆ.

Related Posts

Leave a Reply

Your email address will not be published.