ಅಪ್ರಾಪ್ತ ಬಾಲಕನಿಂದ ನಕಲಿ ಮತದಾನ : ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ನಡುವೆ ವಾಗ್ವಾದ

ಕಾರ್ಕಳ: ಅಪ್ರಾಪ್ತ ಬಾಲಕನೋರ್ವ ನಕಲಿ ಮತದಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ಲಾಠಿ ಬೀಸಿದ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಕುಂಟಿಬೈಲ್ ಮತಗಟ್ಟೆ ಬುಧವಾರ ರಾತ್ರಿ ನಡೆದಿದೆ. ಈ ಬಗ್ಗೆ ಮತಯಂತ್ರ ಹಾಗೂ ಚುನಾವಣಾ ಸಿಬ್ಬಂದಿ ಸಂಚರಿಸಬೆಕಾಗಿದ್ದ ಬಸ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆ ಹಿಡಿದಿದ್ದಾರೆ. ಬಿಜೆಪಿ ಕಾರ್ಯಕರ್ತರು ನಕಲಿ ಮತದಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಮುಂಜಾನೆ ಮತಯಂತ್ರ ಕೈಕೊಟ್ಟ ಕಾರಣ ಒಂದು ಘಂಟೆ ತಡವಾಗಿ ಮತದಾನ ಅರಂಭವಾಗಿತ್ತು.

ಒಟ್ಟು ಮತದಾನ ವಿವರ: ಕಾರ್ಕಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ209 ಬೂತ್ ಗಳಿದ್ದು ಅದರಲ್ಲಿ ಪುರುಷ 91435 ಮತದಾರರಿದ್ದು , 99142 ಮಹಿಳಾ ಮತದಾರರಿದ್ದು ಒಟ್ಟು 190577 ಮತದಾರರಿದ್ದಾರೆ. ಅದರಲ್ಲಿ 81068 ಮಹಿಳಾ ಮತದಾರರು 73870 ಪುರುಷ ಮತದಾರರು ಮತ ಚಲಾಯಿಸಿದ್ದಾರೆ . ಒಟ್ಟು 154938 ಮತಗಳು ಚಲಾವಣೆಯಾಗಿವೆ. ಶೇಕಡಾ 81.30% ಮತದಾನವಾಗಿದೆ.

Related Posts

Leave a Reply

Your email address will not be published.