ಮ್ಯಾಪ್ಸ್ ಕಾಲೇಜಿನಲ್ಲಿ ಕೃತಿಗಳ ಬಿಡುಗಡೆ : ಬಿಸು ಹಬ್ಬದ ವಿಚಾರ ವಿನಿಮಯ ಕಾರ್ಯಕ್ರಮ
ತುಳು ಪರಿಷತ್ ಮತ್ತು ಮ್ಯಾಪ್ಸ್ ಕಾಲೇಜು ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಲೇಖಕಿ ಶಾರದಾ ಅಂಚನ್ ಅವರ ನಂಬಿ ಸತ್ಯೋಲು ಮತ್ತು ರಕ್ತ ಶುದ್ಧಿ- ಆರೋಗ್ಯ ವೃದ್ಧಿ ಹಾಗೂ ಡಾ. ಪ್ರಭಾಕರ ನೀರ್‍ಮಾರ್ಗ ಅವರ ಕಾದಂಬರಿ ಓಲಗ ಕೃತಿಗಳ ಬಿಡುಗಡೆ ಕಾರ್ಯಕ್ರಮ ಮತ್ತು ಬಿಸು ಹಬ್ಬದ ವಿಚಾರ ವಿನಿಮಯ ಕಾರ್ಯಕ್ರಮವು ನಗರದ ಬಂಟ್ಸ್ ಹಾಸ್ಟೆಲ್ ಸಮೀಪದ ಮ್ಯಾಪ್ಸ್ ಕಾಲೇಜಿನಲ್ಲಿ ನಡೆಯಿತು.
ನಗರದ ಮ್ಯಾಪ್ಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಬಿ.ಎಂ. ರೋಹಿಣಿ ಅವರು ಕೃತಿಗಳನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಪುಸ್ತಕ ಪ್ರಕಟ ಮಾಡುವಷ್ಟೇ ಕಷ್ಟದ ಕೆಲಸ ಅದನ್ನು ಮಾರಾಟ ಮಾಡುವುದು, ಆದರೆ ಇಬ್ಬರು ಲೇಖಕರು ವರ್ಷಕ್ಕೆ ಒಂದು ಅಥವಾ ಎರದು ಪುಸ್ತಕ ಬಿಡುಗಡೆ ಮಾಡುವ ಮೂಲಕ ಆಶ್ಚರ್ಯ ಮೂಡಿಸುತಿದ್ದಾರೆ ಹಾಗೂ ಮೂರು ಪುಸ್ತಕಗಳನ್ನು ಒಟ್ಟಿಗೆ ಬಿಡುಗಡೆ ಮಾಡುವುದು ತುಂಬಾ ವಿಶೇಷವಾಗಿದೆ ಎಂದರು.
ತುಳು ಸಾಹಿತಿ ಕುಶಾಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ಅವರು ತುಳುನಾಡಿನಲ್ಲಿ ಬಿಸು ಹಬ್ಬದ ಆಚರಣೆ ಮತ್ತು ಅದರ ಮಹತ್ವದ ಬಗ್ಗೆ ವಿವರಿಸಿದರು.
ನಂತರ ಲೇಖಕಿ ಶಾರದಾ ಅಂಚನ್ ರವರು ಮಾತನಾಡಿ, ನಾವೆಲ್ಲರು ಸಜ್ಜನರ ಸಹವಾಸ ಮಾಡಬೇಕು, ಆಗ ಅವರು ನಮ್ಮ ಎಲ್ಲಾ ಪರಿಸ್ಥಿತಿಗಳಲ್ಲೂ ನಮಗೆ ಸಹಕಾರ ನೀಡುತ್ತಾರೆ ಎಂದು ಹೇಳಿದರು.
ನಂತರ ಮಾಪ್ಸ್ ಕಾಲೇಜಿನ ಅಧ್ಯಕ್ಷರಾದ ದಿನೇಶ್ ಆಳ್ವ ಮಾತನಾಡಿ, ಬಿಸು ಹಬ್ಬದ ಮಹತ್ವ ಮತ್ತು ಆಚರಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಿದ ಕುಶಾಲಾಕ್ಷಿ ಅವರನ್ನು ಅಭಿನಂದಿಸಿ, ಕೃತಿಯ ಲೇಖಕರಿಗೆÀ ಶುಭ ಹಾರೈಸಿದರು. ಎಂಆರ್‍ಪಿಎಲ್‍ನ ನಿವೃತ್ತ ಮಹಾಪ್ರಬಂಧಕರಾದ ವೀಣಾ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮುಂದೆ ತಮ್ಮ ಬದುಕು ಕೇವಲ ವೃತ್ತಿಗೆ ಮಾತ್ರ ಸೀಮಿತವಾಗಿಡಬಾರದು, ಸಾಮಾಜಿಕ ಆಯಾಮಗಳೂ ನಮ್ಮ ಬದುಕಿಗೆ ಅತೀ ಮುಖ್ಯವಾಗಿದೆ. ಕೇವಲ ಹಣ ಸಂಪಾದನೆಯೊಂದೇ ಉದ್ದೇಶವಾಗಿರದೆ, ನಮ್ಮ ಸಂಸ್ಕøತಿ ಮತ್ತು ಆಚರಣೆಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಚಂದ್ರಹಾಸ ಸುವರ್ಣ, ತುಳು ಪರಿಷತ್‍ನ ಪ್ರಧಾನ ಕಾರ್ಯದರ್ಶಿಯಾಗಿರುವ ಬೆನೆಟ್ ಅಮ್ಮನ್ನ, ಸಾಹಿತಿ ಡಾ.ಪ್ರಭಾಕರ್ ನೀರುಮಾರ್ಗ ಉಪಸ್ಥಿತರಿದ್ದರು.ತುಳು ಪರಿಷತ್ತಿನ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿದರು, ಕೋಶಾಧಿಕಾರಿ ಶುಭೋಧಯ ಆಳ್ವ ಸ್ವಾಗತಿಸಿ, ಡಾ.ಪ್ರಭಾಕರ ನೀರ್‍ಮಾಗ್ ಅವರು ಗಣ್ಯರಿಗೆ ನೆನಪಿನ ಕಾಣಿಕೆ ನೀಡಿದರು.