ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ; ಮ್ಯಾಪ್ಸ್ ಪಿಯು ಕಾಲೇಜು ಅನನ್ಯಾಗೆ ರಾಜ್ಯದಲ್ಲಿ 10ನೇ ರ್‍ಯಾಂಕ್
2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಮ್ಯಾಪ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಮ್ಯಾಪ್ಸ್ ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ರ್‍ಯಾಂಕ್ ಗಳಿಸಿದ್ದು, ಕುಮಾರಿ ಅನನ್ಯಾ ಎ. 600ರಲ್ಲಿ 588 ಅಂಕಗಳನ್ನು ಪಡೆದು ರಾಜ್ಯದಲ್ಲಿ ಹತ್ತನೇ ರ್‍ಯಾಂಕ್ ಪಡೆದಿರುತ್ತಾರೆ. ಕಾಲೇಜಿಗೆ ಶೇ.99 ಫಲಿತಾಂಶ ಲಭಿಸಿದ್ದು, ಶೇ.50 ವಿಶಿಷ್ಟ ಶ್ರೇಣಿ ಹಾಗು ಶೇ.46 ಪ್ರಥಮ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮ್ಯಾಪ್ಸ್ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ತೃತೀಯ ಹಾಗೂ ಎಂಟನೇ ರ್ಯಾಂಕ್ ಪಡೆದಿರುತ್ತಾರೆ.