ಬಂಟ ಸಾಂಸ್ಕøತಿಕ ವೈಭವ-2023

ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ ಇದರ 9ನೇ ವರ್ಷದ ಸಂಭ್ರಮದ ಪ್ರಯುಕ್ತ ಬಂಟ ಸಾಂಸ್ಕøತಿಕ ವೈಭವ 2023 ಬಂಟ ಸಮಾಜದ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಗರದ ಉರ್ವಾಸ್ಟೋರ್‍ನ ಅಂಬೇಡ್ಕರ್ ಭವನದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್‍ಫೆರ್ ಟ್ರಸ್ಟ್‍ನ ಸ್ಥಾಪಕಾಧ್ಯಕ್ಷರಾದ ಎ.ಸದಾನಂದ ಶೆಟ್ಟಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವು ಬಂಟ ಸಾಂಸ್ಕøತಿಕ ವೈಭವ ವಿಜೃಂಭಣೆಯಿಂದ ನಡೆಯಲಿದೆ. ಬಿಸು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ವಿಶೇಷ ಅತಿಥಿ ನ್ಯಾಯವಾದಿ ಲಯನ್ ಜಯಪ್ರಕಾಶ್ ರೈ, ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್‍ನ ಕಾರ್ಯಾಧ್ಯಕ್ಷರಾದ ದೇವಿಚರಣ್ ಶೆಟ್ಟಿ, ಪ್ರಧಾನ ಉಪಾಧ್ಯಕ್ಷರಾದ ಸುರೇಶ್ ಚಂದ್ರ ಶೆಟ್ಟಿ, ಸಂಚಾಲಕರಾದ ರಾಜ್ ಗೋಪಾಲ್ ರೈ, ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮೀ ಪಿ ಶೆಟ್ಟಿ , ಕಾರ್ಯಕ್ರಮದ ಸಂಚಾಲಕಿ ಆರತಿ ಆಳ್ವ , ಮತ್ತಿತರರು ಉಪಸ್ಥಿತರಿದ್ದರು .ಕಾರ್ಯಕ್ರಮದಲ್ಲಿ ಬಿಸು ಕಣಿ ಇಡಲಾಗಿತ್ತು. ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.