ಭಾರತೀಯ ಸನಾತನ ಪರಂಪರೆ ಅಮೂಲ್ಯವಾದದ್ದು : ಅಮೃತ ವೈಭವದಲ್ಲಿ ಸಂಪೂಜ್ಯ ಸ್ವಾಮೀ ಪೂರ್ಣಾಮೃತಾನಂದ ಪುರಿ

ಮಂಗಳೂರು: ನಗರದ ಮಾತಾ ಅಮೃತಾನಂದಮಯಿ ಮಠದಲ್ಲಿ “ಅಮೃತ ವೈಭವ” ಕಾರ್ಯಕ್ರಮ ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು.
ಅಮೃತಪುರಿಯಿಂದ ಆಗಮಿಸಿದ ಮಾತಾ ಅಮೃತಾನಂದಮಯಿ ದೇವಿಯವರ ಹಿರಿಯ ಶಿಷ್ಯ, ಟ್ರಸ್ಟೀ ಹಾಗೂ ವಿಶ್ವವಿಖ್ಯಾತ ಮಾತಾ ಅಮೃತಾನಂದಮಯಿ ಮಠದ ಪ್ರಧಾನ ಕಾರ್ಯದರ್ಶಿ ಸಂಪೂಜ್ಯ ಸ್ವಾಮಿ ಪೂರ್ಣಾಮೃತಾನಂದ ಪುರಿಯವರಿಂದ,
ಪೂಜನೀಯ ಸ್ವಾಮಿನಿ ಮಂಗಳಾಮೃತ ಪ್ರಾಣರವರ ದಿವ್ಯ ಉಪಸ್ಥಿತಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವೈಭವ ಪೂರ್ಣವಾಗಿ ನೆರವೇರಿತು.

Sampoojya Swami Poornamritananda Puri

ಆರಂಭದಲ್ಲಿ ಸ್ವಾಮೀಜಿಯವರಿಗೆ ಮಠ ಮತ್ತು ಅಮೃತ ವಿದ್ಯಾಲಯದ ವತಿಯಿಂದ ತುಳುನಾಡ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ ನೀಡಿ, ಪಾದಪೂಜೆಗೈದು ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ನಂತರ ಅಮೃತ ಜ್ಯೋತಿ ಬೆಳಗಿಸಿ,ಶ್ರೀ ಗುರುಪಾದುಕಾ ಪೂಜೆಮಾಡಿ ಆಶೀರ್ವಚನವಿತ್ತು ಭಾರತೀಯ ಸನಾತನ ಪರಂಪರೆಯು ಸಾವಿರಾರು ವರ್ಷಗಳಷ್ಟು ಪುರಾತನವಾಗಿದ್ದು ಅಮೂಲ್ಯ ಜೀವನಾನುಭವಗಳನ್ನು ಸಮಾಜಕ್ಕೆ ನೀಡಿದೆ. ಅದನ್ನು ಪುನರುಜ್ಜೀವಿಸಿ ಹೊಸ ತಲೆಮಾರನ್ನು ಸಂಪನ್ನವಾಗಿ ಕಟ್ಟ ಬೇಕಾಗಿದೆ ಎಂದರು.

ಇದು ಉತ್ತರಾಯಣ ಪ್ರಾರಂಭದ ಶುಭ ಕಾಲ ಎಂದು ಅದರ ಮಹತ್ವದ ಬಗ್ಗೆ ಅರ್ಥ ಪೂರ್ಣ ಪ್ರವಚನ ನೀಡಿದರು .ಆಧುನಿಕ ಜೀವನ ಶೈಲಿಯ ಸಾಧಕ ಬಾಧಕಗಳ ಬಗ್ಗೆ ಅರಿವು ಮೂಡಿಸಿ ಅದಕ್ಕೆ ಸರಳವಾದ ಭಾರತೀಯ ಆಧ್ಯಾತ್ಮಿಕ ಪರಿಹಾರೋಪಾಯಗಳನ್ನು ತಿಳಿಸಿದರು.
ಸ್ವಾಮೀಜಿಯವರು ತಂಡದೊಂದಿಗೆ ಹಾಡಿದ ಅಮ್ಮನ ಸುಶ್ರಾವ್ಯ ಭಜನೆಯ ತರಂಗಗಳು ನೆರೆದಿದ್ದ ಭಕ್ತಸಮೂಹದಲ್ಲಿ ಭಕ್ತಿಯ ಸಂತೃಪ್ತ ಭಾವ ಮೂಡಿಸಿತು.

Sampoojya Swami Poornamritananda Puri


ಸೇವಾ ಸಮಿತಿಯ ಅಧ್ಯಕ್ಷ ಡಾ.ವಸಂತಕುಮಾರ ಪೆರ್ಲ ಸ್ವಾಗತಿಸಿದರು. ಸಿಎ ವಾಮನ್ ಕಾಮತ್ ವಂದಿಸಿದರು. ತನುಷಾ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು.ಈ ಸಂದರ್ಭದಲ್ಲಿ ಡಾ.ಜೀವರಾಜ್ ಸೊರಕೆ,ಡಾ.ವೈ ಸನತ್ ಹೆಗ್ಡೆ, ಮುರಳೀಧರ್ ರಮಾಣಿ,ಶ್ರೀಮತಿ ಶ್ರುತಿ ಸನತ್ ಹೆಗ್ಡೆ, ಮುರಳೀಧರ್ ಶೆಟ್ಟಿ, ಸುರೇಶ್ ಅಮೀನ್,ಡಾ.ಆರತಿ ಶೆಟ್ಟಿ, ಯತೀಶ್ ಬೈಕಂಪಾಡಿ, ಸದಾಶಿವ ಭಟ್,ರಮಾ ಭಟ್,ಡಾ.ಅಶೋಕ ಶೆಣೈ, ಭರತ್ ಕುಮಾರ್ ಎರ್ಮಾಳ್,ಸಿಎ ರಾಮನಾಥ್,ಶಿಲ್ಪಾರೈ,ಪ್ರವೀಣ್ ಶಬರೀಶ್ ಮೊದಲಾದ ಸೇವಾ ಸಮಿತಿಯ ಪದಾಧಿಕಾರಿಗಳು, ಅಮ್ಮನ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆಗಮಿಸಿದ ಎಲ್ಲರಿಗೂ ಸ್ವಾಮೀಜಿಯವರು ಪ್ರಸಾದ ವಿತರಣೆ ಮಾಡಿದರು ಮತ್ತು ಮಹಾ ಪ್ರಸಾದ ನೀಡಲಾಯಿತು.

Related Posts

Leave a Reply

Your email address will not be published.