ಮೆಲ್ಕಾರ್ : ಶ್ರೀ ಗುರು ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ನಿ. ಉದ್ಘಾಟನಾ ಕಾರ್ಯಕ್ರಮ
ಬಂಟ್ವಾಳ: ಮೆಲ್ಕಾರ್‍ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ಗುರು ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ನಿ. ಇದರ ನೂತನ ಕಡೆಗೋಳಿ ಶಾಖೆಯು ಪುದು ಗ್ರಾಮದ ಕಡೆಗೋಳಿಯ ಶ್ರೀ ನಾರಾಯಣ ಕಾಂಪ್ಲೆಕ್ಸ್‍ನಲ್ಲಿ ಶುಭಾರಂಭಗೊಂಡಿತು.ಸಂಘದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಸ್ವಾಗತಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶಕ್ಕೆ ಆರ್ಥಿಕ ಶಕ್ತಿಯ ಬೆಳಕನ್ನು ದ.ಕ. ಜಿಲ್ಲೆ ನೀಡಿದೆ. ಗ್ರಾಮೀಣ ಭಾಗದ ಜನರಿಗೆ ರಾಷ್ಟ್ರೀೀಕೃತ ಬ್ಯಾಂಕುಗಳು ನೀಡಲು ಸಾಧ್ಯವಾಗದಂತಹ ಆರ್ಥಿಕ ಸಹಕಾರವನ್ನು ಸಹಕಾರಿ ಸಂಘಗಳು ನೀಡುತ್ತಿದೆ. ಶ್ರೀ ಗುರು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ 65 ಕೋಟಿ ರೂಪಾಯಿಯ ವ್ಯವಹಾರ ನಡೆಸಿ 20 ಲಕ್ಷ ರೂಪಾಯಿ ಲಾಭ ಗಳಿಸಿ ಸದಸ್ಯರಿಗೆ ಶೇ.13 ಡಿವಿಡೆಂಡ್ ನೀಡಿದೆ. ಮುಂದಿನ ದಿನಗಳಲ್ಲಿ ವಿಟ್ಲದಲ್ಲಿ 5ನೇ ನೂತನ ಶಾಖೆ ಆರಂಭಿಸುವುದಾಗಿ ಅವರು ತಿಳಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ನೂತನ ಶಾಖೆಯನ್ನು ಉದ್ಘಾಟಿಸಿದರು. ಅವರು ಮಾತನಾಡಿ ದ. ಕ. ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ವಿಶಿಷ್ಠವಾದ ಕೊಡುಗೆಯನ್ನು ನೀಡಿದ್ದು 4 ರಾಷ್ಟ್ರೀಕೃತ ಬ್ಯಾಂಕ್‍ಗಳು ಹಾಗೂ ಒಂದು ಖಾಸಗಿ ಬ್ಯಾಂಕ್‍ನ ದೇಶಕ್ಕೆ ಕೊಟ್ಟ ಕೀರ್ತಿ ನಮ್ಮ ಜಿಲ್ಲೆಗೆ ಸಲ್ಲುತ್ತದೆ. ಬುದ್ದಿವಂತರ ಜಿಲ್ಲೆಯ ಜನರು ಆರ್ಥಿಕ ವ್ಯವಸ್ಥೆಯ ನಿರ್ವಹಣೆಯಲ್ಲೂ ಹೆಚ್ಚು ಬುದ್ದಿವಂತರಾಗಿದ್ದಾರೆ, ನಮ್ಮ ಜಿಲ್ಲೆಯಲ್ಲಿ ಕೃಷಿ ಅವಲಂಭಿತ ಜನರಿದ್ದರೂ ಕೂಡ ಹೆಚ್ಚು ವ್ಯವಹಾರಿಕ ಜ್ಞಾನವನ್ನು ಹೊಂದಿದವರಾಗಿದ್ದಾರೆ ಎಂದರು. ಬದಲಾದ ಘಟ್ಟದಲ್ಲಿ ಇಂದು ದೊಡ್ಡ ಮಟ್ಟದ ಆರ್ಥಿಕ ಸಹಕಾರವನ್ನು ನೀಡುವಷ್ಟು ಸಹಕಾರಿ ಬ್ಯಾಂಕ್ ಗಳು ಬೆಳೆದಿದೆ ನಂಬಿಕೆ ಹಾಗೂ ವಿಶ್ವಾಸದಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಯುತ್ತದೆ. ಸಾಲವನ್ನು ಸರಿಯಾದ ಸಂದರ್ಭದಲ್ಲಿ ಮರು ಪಾವತಿ ಮಾಡುವ ಮನಸ್ಸು ಹಾಗೂ ಜವಬ್ದಾರಿ ಗ್ರಾಹಕರಲ್ಲಿದ್ದಾಗ ಸಹಕಾರಿ ಬ್ಯಾಂಕ್‍ಗಳು ಉತ್ತಮ ಸ್ಥಿತಿಯಲ್ಲಿ ಬೆಳೆಯುತ್ತದೆ ಎಂದರು.
ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ ಸೇಫ್ ಲಾಕರ್ ಉದ್ಘಾಟಿಸಿ ಶೂಭಕೋರಿದರು. ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಕಟ್ಟಡ ಮಾಲಕಿ ಭಾರತಿ ಎನ್. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಿರ್ದೇಶಕರಾದ ಕೆ. ಸೇಸಪ್ಪ ಕೋಟ್ಯಾನ್, ಕೆ. ಸಂಜೀವ ಪೂಜಾರಿ, ರತ್ನಾಕರ ಪೂಜಾರಿ ನಾಡಾರ್, ಉಮೇಶ್ ಸುವರ್ಣ ತುಂಬೆ, ರತ್ನಾಕರ ಪೂಜಾರಿ ಮೆಲ್ಕಾರ್, ತುಳಸಿ ಇರಾ, ಲಕ್ಷ್ಮೀ ಪೆರ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಸ್ವಾಗತಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಉಪಾಧ್ಯಕ್ಷ ರಮೇಶ್ ಅನ್ನಪ್ಪಾಡಿ ವಂದಿಸಿದರು. ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.