ಜೈನ ಮುನಿಯ ಹತ್ಯೆ ಪ್ರಕರಣ: ಹತ್ಯೆ ಮಾಡಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಅಭಯಚಂದ್ರ ಜೈನ್ ಆಗ್ರಹ
ಚಿಕ್ಕೋಡಿ ದಿಗಂಬರ ಜೈನ ಮುನಿಯ ಹತ್ಯೆಯನ್ನು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಖಂಡಿಸಿ, ಹತ್ಯೆ ಮಾಡಿರುವವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.
ಜೈನ ಮುನಿಗಳು ತ್ಯಾಗಮಯಿಗಳು. ಸರ್ವಸ್ವವನ್ನು ತ್ಯಾಗ ಮಾಡಿ ಮುನಿ ದೀಕ್ಷೆಯನ್ನು ತೆಗೆದುಕೊಂಡವರು. ಮುನಿಗಳ ಆಪ್ತರೇ ಕೊಲೆ ಮಾಡುವಂತಹ ಕೃತ್ಯಕ್ಕೆ ಕೈ ಹಾಕಿರುವುದು ಖಂಡನೀಯ. ಜೈನ ಮುನಿಗಳು ಅಹಿಂಸಾ ತತ್ವದ ಮುಖಾಂತರ ಬದುಕುವ ಶ್ರೇಷ್ಠ ಜೀವಿಗಳು. ಅಂತಹ ಶ್ರೇಷ್ಠ ಮುನಿಗಳನ್ನೇ ಹತ್ಯೆ ಮಾಡಿರುವ ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಅಭಯಚಂದ್ರ ಜೈನ್ ಆಗ್ರಹಿಸಿದರು.