ಮೂಡುಬಿದಿರೆ : ಶಿಷ್ಯನ ಪರವಾಗಿ ಮಾಜಿ ಸಚಿವ ಜೈನ್ ಮತಯಾಚನೆ
ಮೂಡುಬಿದಿರೆ – ತನ್ನ ಶಿಷ್ಯ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಗುರುವಾರ ಪುರಸಭಾ ವ್ಯಾಪ್ತಿಯ ವಾರ್ಡ್ ನಂಬ್ರ 15ರ ಕೊಡಂಗಲ್ಲು ಪರಿಸರದ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಚುನಾವಣೆ ಪ್ರಣಾಳಿಕೆಯ 300 ಗ್ಯಾರಂಟಿ ಕಾರ್ಡ್ ಹಸ್ತಾಂತರಿಸಿದ ಅಭಯಚಂದ್ರ ಅವರು ಮಿಥುನ್ ರೈಯನ್ನು ಮರೆಯದಿರಿ ಎಂದರು. ವಾರ್ಡ್ ಸದಸ್ಯೆ ರೂಪಾ ಸಂತೋಷ್ ಶೆಟ್ಟಿ, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಕೊರಗಪ್ಪ, ಸುರೇಶ್ ಪ್ರಭು, ಜೊಸ್ಸಿ ಮಿನೇಜಸ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ ಮತ್ತಿತರರು ಮತ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.