ಮೂಡುಬಿದಿರೆ : ಸಾಯಿ ಮಾನಾ೯ಡ್ ಸೇವಾ ಸಂಘದಿಂದ ಅನಾರೋಗ್ಯ ಪೀಡಿತರಿಗೆ ನೆರವು
                                                ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ 63ನೇ ಸೇವಾ ಯೋಜನೆಯ ಅಂಗವಾಗಿ ಮೇ ತಿಂಗಳ 1ನೇ ಯೋಜನೆಯನ್ನು ದರೆಗುಡ್ಡೆ ಗ್ರಾಮದ ಆನೆಗುಡ್ಡೆ ಪರಿಸರದ ಅನಾರೋಗ್ಯ ಪೀಡಿತರಾಗಿರುವ ವಿಜಯ್ ಪೂಜಾರಿ ಅವರ ಚಿಕಿತ್ಸೆಗೆ ಆಥಿ೯ಕ ನೆರವನ್ನು ನೀಡಲಾಯಿತು.
ಆನೆಗುಡ್ಡೆ ಪರಿಸರದ ವಿಜಯ್ ಪೂಜಾರಿ ಅವರು ಮುಂಬೈಯಲ್ಲಿ ಸಣ್ಣ ಉದ್ಯೋಗದಲ್ಲಿರುವಾಗ ಆಕ್ಸಿಡೆಂಟ್ ಆಗಿ ಕಾಲಿನ ಎಲುಬು ಮುರಿತವಾಗಿರುತ್ತದೆ. ಅವರಿಗೆ ಒಂದು ವರ್ಷ ಕೆಲಸಕ್ಕೆ ಹೋಗದಂತೆ ವೈದ್ಯರು ತಿಳಿಸಿರುತ್ತಾರೆ.
ಅವರಿಗೆ ಇಬ್ಬರು ಮಕ್ಕಳಿದ್ದು ಹೆಣ್ಣು ಮಗಳು ಲಾಸ್ಟ್ ಇಯರ್ ಡಿಗ್ರಿ, ಗಂಡು ಮಗ ಫಸ್ಟ್ ಇಯರ್ ಡಿಗ್ರಿಯಲ್ಲಿ ಓದುತ್ತಿದ್ದಾರೆ. ಇವರ ಮನೆಯ ಸಂಪೂರ್ಣ ಜವಾಬ್ದಾರಿಯು ವಿಜಯ್ ಪೂಜಾರಿ ಅವರ ಮೇಲಿದ್ದು ಈಗ ಕೆಲಸಕ್ಕೆ ಹೋಗದೆ ಮನೆಯ ಜವಾಬ್ದಾರಿ ಜೊತೆಗೆ, ಅವರ ಆರೋಗ್ಯವನ್ನು ನೋಡಿಕೊಳ್ಳಲು ಕಷ್ಟ ಆಗಿರುವುದರಿಂದ ಅವರ ಕಷ್ಟಕ್ಕೆ ಸಾಯಿ ಮಾನಾ೯ಡ್ ಸೇವಾ ಸಂಘವು ಸ್ಪಂಧಿಸಿ ಬುಧವಾರ ಧನ ಸಹಾಯವನ್ನು ಹಸ್ತಾಂತರಿಸಿದೆ.



							
							














