ತಾಯಿ ತಾಪ
ಇತ್ತೀಚೆಗೆ ಬೆಂಗಳೂರಿನಲ್ಲಿ ತಾಯಿ ಒಬ್ಬರು ಪ್ರಿಯಕರನೊಡನೆ ಸೇರಿ ಎರಡೂವರೆ ವರುಷದ ಮಗುವನ್ನು ಹಿಂಸಿಸಿದ್ದು ವರದಿಯಾಗಿದೆ. ಬೆಂಗಳೂರು ಹೊಸಕೆರೆಹಳ್ಳಿಯ ಈ ಪ್ರಕರಣದಲ್ಲಿ ಅಕ್ರಮ ದಂಪತಿಯನ್ನು ಬಂಧಿಸಲಾಗಿದೆ. ತಿಂಗಳ ಹಿಂದೆ ಅದೇ ಬೆಂಗಳೂರಿನಲ್ಲಿ ಇದೇ ರೀತಿಯ ಅಕ್ರಮ ದಂಪತಿಯು ಮಗುವನ್ನು ಕೊಂದು ಈಗ ಜೈಲಿನಲ್ಲಿ ಇದ್ದಾರೆ. ಮೊಕದ್ದಮೆ ನಡೆದಿದೆ.
ಎಲ್ಲ ತಾಯಂದಿರು ಒಂದಲ್ಲ ಒಂದು ಬಾರಿ ಮಗುವಿಗೆ ಹೊಡೆಯುತ್ತಾರೆ. ಆಮೇಲೆ ಅವರೇ ಮುದ್ದು ಮಾಡುತ್ತಾರೆ. ಸಾಮಾನ್ಯವಾಗಿ ಹಠ ಮಾಡುವ ಮಕ್ಕಳು ಅಮ್ಮನ ಏಟು ತಿಂದೇ ಇರುತ್ತಾರೆ. ಇವೆಲ್ಲ ಮಾನವ ಸಹಜ ವ್ಯವಹಾರ. ಆದರೆ ಮೊದಲು ಹೇಳಿದ ಪ್ರಕರಣಗಳ ಮುಖ್ಯ ಕಾರಣ ದಾಂಪತ್ಯ ವಿರಸ, ಪತಿಯು ಮಗು ಮಾಡಿ ಕೈಕೊಡುವುದು, ಜೀವನದ ಅಭದ್ರತೆ ಇವೆಲ್ಲ ಅಮ್ಮಂದಿರನ್ನು ಮನೋ ದೌರ್ಬಲ್ಯದ ಇಕ್ಕಟ್ಟಿಗೆ ದೂಡಿರುವ ಪ್ರಕರಣಗಳಾಗಿ ಕಾಣಿಸುತ್ತವೆ. ಕನ್ನಡದಲ್ಲಿ ಒಂದು ಗಾದೆಯಿದೆ, ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂದು. ಇದರ ಶಮನಕ್ಕೆ ಕುಟುಂಬ ಕೋರ್ಟುಗಳು ಕೂಡ ಇವೆ. ಆದರೆ ಕುಟುಂಬ ಜಗಳ ಮತ್ತು ಕುಟುಂಬ ಹಿಂಸೆಯಲ್ಲಿ ಮುಖ್ಯ ಬಲಿಪಶು ಹೆಣ್ಣು.
ಇಂತಾ ಪ್ರಕರಣಗಳಲ್ಲಿ ಹೆಣ್ಣಿನ ತಪ್ಪು ಐದು ಶೇಕಡಾ ಇದ್ದರೆ ಗಂಡಿನ ತಪ್ಪು ಮತ್ತು ಒತ್ತಡ ತೊಂಬತ್ತಯಿದು ಶೇಕಡಾ ಇರುತ್ತದೆ. ಕೆಲವು ಗಂಡಸರು ಸಂಪಾದನೆ ಇದ್ದರೂ ಕುಡಿದು ಹೊರಳಾಡಿ ಮನೆಗೆ ಬರುತ್ತಾರೆ. ಹೆಂಡತಿ ಹೇಗೋ ಮಕ್ಕಳನ್ನು ಹೊಟ್ಟೆ ಕಟ್ಟಿ ಸಾಕುತ್ತಾಳೆ. ಕನ್ನಡದ ಪ್ರಸಿದ್ಧ ಟೀವಿ ನಿರೂಪಕಿ ಒಬ್ಬಳ ಅಪ್ಪ ಕಡೆಗಾಲದಲ್ಲಿ ಸಂಸಾರದ ನೆರಳು ಬಯಸಿದ್ದಿದೆ. ಇಂತಾ ಘಟನೆಗಳು ಲೋಕದೆಲ್ಲೆಡೆ ನಡೆಯುತ್ತವೆ. ಬ್ರೆಜಿಲ್ ನಟಿಯರ ಇಂತಾ ಹತ್ತಾರು ಪ್ರಕರಣಗಳು ಇವೆ. ಆದರೆ ಎಲ್ಲ ತಾಯಂದಿರು ತಮ್ಮ ಮಕ್ಕಳನ್ನು ತಾವೊಬ್ಬರೆ ಸಾಕುವ ಮನೋದೃಢತೆ ಹೊಂದಿರುವುದಿಲ್ಲ. ಆಗ ಆಗುತ್ತವೆ ಆತ್ಮಹತ್ಯೆಗಳು. ಅಂತಾ ನೊಂದ ಪರಿತ್ಯಕ್ತ ಹೆಣ್ಣಿಗೆ ಹೊಸ ಗಂಡು ಸಹವಾಸ ಬೇಕಾಗುತ್ತದೆ. ಹಾಗೆ ಸಿಗುವವನು ಮಲತಂದೆ ಶಬ್ದದಲ್ಲಿರುವ ಮಲ ಬುದ್ಧಿಯವನಾದರೆ ಮಗು ಹಿಂಸೆಗೆ ಬೀಳುತ್ತದೆ. ಬೆಂಗಳೂರಿನ ಎರಡೂ ಮಗು ಹಿಂಸೆ ಪ್ರಕರಣಗಳು ಆ ರೀತಿಯ ಮನೋ ದ್ವಂದ್ವದವುಗಳು.
ಅಮೆರಿಕ ಸಂಯುಕ್ತ ಸಂಸ್ಥಾನದ ಕ್ಯಾಲಿಫೆÇೀರ್ನಿಯಾದಲ್ಲಿ ಒಂದು ಕೂಗನ್ ಕಾಯ್ದೆ ಎಂಬುದು ಇದೆ. ಅದರ ಹೆಸರು ಕ್ಯಾಲಿಫೆÇೀರ್ನಿಯಾ ಚೈಲ್ಡ್ ಆ?ಯಕ್ಟರ್ಸ್ ಬಿಲ್. ಆದರೆ ಜನರ ಬಾಯಿಯಲ್ಲಿ ಅದು ಕೂಗನ್ ಕಾಯ್ದೆ ಎಂದೇ ಪ್ರಸಿದ್ಧ. ಜಾನ್ ಲೆಸ್ಲಿ ಕೂಗನ್ ಇಲ್ಲವೇ ಜಾಕಿ ಕೂಗನ್ ಹಾಲಿವುಡ್‍ನಲ್ಲಿ ಮೂಕಿ ಚಿತ್ರಗಳ ಕಾಲದಲ್ಲಿ ನಂಬರ್ ಒನ್ ಬಾಲ ನಟ ಆಗಿದ್ದಾತ. 1919ರ ಚಾರ್ಲಿ ಚಾಪ್ಲಿನ್ ಅವರ ‘ದ ಕಿಡ್’ ಚಿತ್ರ ಜಾಕಿ ಕೂಗನ್‍ನನ್ನು ಬಾಲ ಸೂಪರ್ ಸ್ಟಾರ್ ಮಾಡಿತ್ತು. ಸಾಲು ಚಿತ್ರಗಳಲ್ಲಿ ನಟಿಸಿದ ಈ ಬಾಲ ನಟ ಕೋಟಿ ಕೋಟಿ ಸಂಪಾದಿಸಿದ. ಈತನ ತಾಯಿ ಆ ಹಣದಿಂದ ತನ್ನ ಹೊಸ ಗೆಳೆಯನೊಂದಿಗೆ ಮಜಾ ಮಾಡಿಕೊಂಡು ತಿರುಗುತ್ತಿದ್ದಳು.
ಜಾಕಿ ಕೂಗನ್ ಪಿತ ಜಾನ್ ಹೆನ್ರಿ ಕೂಗನ್ ಖ್ಯಾತ ರಂಗ ನಟ. ಆತನ ಹೆಂಡತಿ ಲಿಲಿಯನ್ ರೀಟಾ ಸಹ ರಂಗ ನಟಿ. ಈ ಕುಟುಂಬದ ಹಲವರು ಬೀದಿ ನಾಟಕ, ಮಿಮಿಕ್ರಿ ಎಂದು ಈಡುಗೊಂಡಿದ್ದರು. ಜಾಕಿ ಕೂಗನ್ ಕೂಡ ನಮ್ಮ ಲೋಹಿತ್ ಅಲಿಯಾಸ್ ಪುನೀತ್ ರಾಜ್‍ಕುಮಾರ್ ರೀತಿ ಹೆತ್ತವರ ಜೊತೆಗೆ ಮಗುವಿದ್ದಾಗಲೆ ರಂಗವೇರಿದರು. ಮೂಕಿ ಚಿತ್ರಗಳಲ್ಲೂ ನಟಿಸಿದರು. ಚಾರ್ಲಿ ಚಾಪ್ಲಿನ್ ಮೂಲಕ ಸ್ಟಾರ್ ನಟನಾದ ಮಗನ ಅನ್ನ ಉಣ್ಣಲು ಜಾನ್ ಹೆನ್ರಿ ಉಳಿಯಲಿಲ್ಲ. ಆದರೆ ಕಿಡ್ ಮೂಲಕ ಜಾಕಿ ಕೂಗನ್ ಕೋಟಿ ಡಾಲರ್ ಕಾಣುತ್ತಲೇ ಲಿಲಿಯನ್ ರೀಟಾಳಿಗೆ ಆರ್ತರ್ ಬರ್ನ್‍ಸ್ಟೆನ್ ಎಂಬವನು ಗಂಟು ಬಿದ್ದ. ಇಬ್ಬರದು ಜಾಲಿಯೋ ಜಾಲಿ.
ಬಾಲ ನಟನ ವಯಸ್ಸು ದಾಟುತ್ತಲೇ ಜಾಕಿ ಕೂಗನ್ ತಾರುಣ್ಯದಲ್ಲಿ ಬೇಗ ಹೆಚ್ಚು ಅವಕಾಶ ಕಾಣಲಿಲ್ಲ. ತಾಯಿ ಮತ್ತು ಮಲತಂದೆ ಈತನ ಎಲ್ಲ ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಜಾಕಿ ಕೂಗನ್ ಆಗ ಚಾರ್ಲಿ ಚಾಪ್ಲಿನ್‍ರಲ್ಲಿ ಸಲಹೆ ಕೇಳಿದ. ಒಂದು ಸಾವಿರ ಡಾಲರ್ ಕೊಟ್ಟ ಚಾರ್ಲಿ ಚಾಪ್ಲಿನ್ ಮೊಕದ್ದಮೆ ಹೂಡಲು ಹೇಳಿದ. ಮೊಕದ್ದಮೆ ವೇಳೆ ತಾಯಿ ಹೇಳಿದ್ದೇನು ಗೊತ್ತೆ? ಮಕ್ಕಳು ಹೆತ್ತವರ ಅಧೀನ, ಆಗ ಮಕ್ಕಳು ಸಂಪಾದಿಸುವುದೆಲ್ಲ ಹೆತ್ತವರದು ಎಂದು ವಾದಿಸಿದಳು. ಕೋರ್ಟು ಒಂದಷ್ಟು ಪರಿಹಾರ ಕೊಡಿಸಿತು. ಜೊತೆಗೆ ಬಾಲ ಕಲಾವಿದರ ರಕ್ಷಣೆಗೆ ಕ್ರಮ ತೆಗೆದುಕೊಳ್ಳುವಂತೆ ಸರಕಾರಕ್ಕೆ ಸೂಚಿಸಿತು. ಅದರಂತೆ ಬಂದುದು ಚೈಲ್ಡ್ ಆ?ಯಕ್ಟರ್ಸ್ ಬಿಲ್. ಆದರೆ ಅದು ಈಗಲೂ ವಕೀಲರು, ಜನರ ಬಾಯಿಯಲ್ಲಿ ಕೂಗನ್ ಕಾಯ್ದೆ.
ನಾನು ದುಡಿದದ್ದು ಕೋಟಿ ಡಾಲರ್, 40 ಲಕ್ಷ ಡಾಲರ್ ಪರಿಹಾರ ಕೊಡುವಂತೆ ಕೂಗನ್ ವಕೀಲರು ವಾದಿಸಿದ್ದರು. ಕೋರ್ಟಿನಿಂದ ಪರಿಹಾರ ಸಿಕ್ಕಿತು, ಅಷ್ಟಲ್ಲ. ಜಾಕಿ ಕೂಗನ್ 1984ರಲ್ಲಿ ಸಾಯುವವರೆಗೂ ಚಿತ್ರರಂಗ, ಟೀವಿಗಳಲ್ಲಿ ತೊಡಗಿಕೊಂಡಿದ್ದರು. ಇಲ್ಲಿ ಪಾರ್ವತಮ್ಮ ರಾಜಕುಮಾರ್ ಅವರು ಮಗ ಬಾಲಕನಾಗಿ ನಟಿಸಿದ್ದಕ್ಕೆ ಎಂದು ಪುನೀತ್ ಫಾರ್ಮ್ ಒಂದನ್ನು ಕಟ್ಟಿ ಕೊಟ್ಟಿದ್ದರು. ಈಗ ಅದು ಪುನೀತ್ ಸಂಸಾರಕ್ಕೆ ಸಿಕ್ಕಿದೆ.
ತೆಂಕಣ ಭಾರತದ ಪ್ರಖ್ಯಾತ ನಟಿ ಕಾಂಚನಾ. ಇವರ ತಾಯಿ ತಂದೆ ಕೂಡ ಮಗಳು ದುಡಿದ ಹಣ ನುಂಗಿ ಕೈಕೊಟ್ಟಿದ್ದರು. ಕಾಂಚನಾ ಬೆಂಗಳೂರಿನಲ್ಲಿ ಅನಾಥೆಯಂತೆ ಕೊನೆಗಾಲ ಕಳೆದರು. ಲೇಡಿ ಚಾರ್ಲಿ ಚಾಪ್ಲಿನ್ ಎನ್ನಲಾದ ಮೇರಿ ಪಿಕ್‌ಫೋರ್ಡ್ ಅವರ ಒಂದು ಮೂಕಿ ಚಿತ್ರ ಡ್ಯಾಡಿ ಲಾಂಗ್ ಲೆಗ್ಸ್. ಅನಾಥ ಬಾಲಕಿಯ ಕತೆ. ಅದು ಭಾರತದ ನಾನಾ ಭಾಷೆಗಳಲ್ಲಿ ನಾನಾ ಅವತಾರ ಎತ್ತಿ ಬಂದಿದೆ. ಹೈಡಿ ಕಾದಂಬರಿ ಹತ್ತಾರು ಬಾರಿ ಸಿನಿಮಾ ಆಗಿದೆ. ಅದು ಗಂಡ ಸತ್ತಾಗ ತಾಯಿಯಿಂದ ತ್ಯಜಿಸಲ್ಪಟ್ಟು ಅಜ್ಜನ ಬಳಿ ಬೆಳೆಯುವ ಬಾಲಕಿಯ ಕತೆ ಹೊಂದಿದೆ.