ಎಂಆರ್‌ಪಿಎಲ್‌ಗೆ ರಿಫೈನರಿ ಟೆಕ್ನಾಲಜಿಯ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಇನ್ನೋವೇಷನ್ ಪ್ರಶಸ್ತಿ
ಮಂಗಳೂರು: ಹೈದರಾಬಾದ್‌ನಲ್ಲಿ ನಡೆದ 28ನೇ ಎನರ್ಜಿ ಟೆಕ್ನೋಲಜಿ ಮೀಟ್-2025ರಲ್ಲಿ ದೇಶದ ಪ್ರಮುಖ ಪೆಟ್ರೋಲಿಯಂ ರಿಫೈನರಿಗಳಲ್ಲೊಂದಾದ ಎಂಆರ್‌ಪಿಎಲ್ 2024-25ನೇಸಾಲಿನ ರಿಫೈನರಿ ಟೆಕ್ನಾಲಜಿಯಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಇನ್ನೋವೇಷನ್ ಅವಾರ್ಡ್ ಗೆದ್ದುಕೊಂಡಿದೆ.
ಈ ಮೂಲಕ ಕಂಪೆನಿಯು ಭಾರತ ಸರಕಾರ ಪ್ರಾಯೋಜಿತ ನಾಲ್ಕನೇ ಪ್ರಶಸ್ತಿಗಳನ್ನು ಪಡೆದುಕೊಂಡಂತಾಗಿದೆ. ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಅವರ ಸಮಕ್ಷಮದಲ್ಲಿ ಪ್ರಶಸ್ತಿಯನ್ನು ಹಸ್ತಾಂತರಿಸಲಾಯಿತು.
ಎಂಆರ್‌ಪಿಎಲ್ ಪರವಾಗಿ ನಿರ್ದೇಶಕ ನಂದಕುಮಾರ್ ವಿ. ಪಿಳ್ಳೈ ಇನ್ನೋವೇಷನ್ ಸೆಂಟರ್ ಮುಖ್ಯಪ್ರಬಂಧಕರಾದ ನಿರ್ಮಲ್ ಗಣೇಶ್ ಹಾಗೂ ಕಾರ್ತಿಕ್ ಆರ್. ಅವರು ಪ್ರಶಸ್ತಿ ಸ್ವೀಕರಿಸಿದರು.
ಎಂಆರ್‌ಪಿಎಲ್ ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದವರು ದೇಶೀಯವಾಗಿ ಗ್ಯಾಜುವಲ್ ಒಲೆಫಿನ್ಸ್ ಆಂಡ್ ಆರೋಮಾಟಿಕ್ ಟೆಕ್ನಾಲಜಿ (ಗೋಟ್) ಕ್ರೂಡ್ -ಟು-ಕೆಮಿಕಲ್ ವಿಧಾನವನ್ನು ಅಭಿವೃದ್ಧಿಪಡಿಸಿದ್ದರು. ಈ ಮೂಲಕ ಕಚ್ಚಾತೈಲವನ್ನು ನೇರವಾಗಿ ಉತ್ಕೃಷ್ಟ ದರ್ಜೆಯ ಪೆಟ್ರೋಕೆಮಿಕಲ್ ಆಗಿ ಪರಿವರ್ತಿಸುವ ಭಾರತದ ಸಾಮರ್ಥ್ಯ ಸಾಬೀತಾಗಿದೆ.


















