ಹಳೆಯಂಗಡಿ : ಗಾಳಿಗೆ ರಸ್ತೆಗುರಳಿದ ತೆಂಗಿನ ಮರ, ವಿದ್ಯುತ್ ಕಂಬಗಳು

ಮೂಲ್ಕಿ ತಾಲ್ಲೂಕಿನ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳುವೈಲು ಪ್ರದೇಶದಲ್ಲಿ ಮಧ್ಯಾಹ್ನ ಬೀಸಿದ ಭಾರೀ ಗಾಳಿಗೆ ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರಗಳ ಸಹಿತ, ವಿದ್ಯುತ್ ಕಂಬಗಳು ಧರೆಶಾಹಿಯಾದ ಘಟನೆ ನಡೆದಿದ್ದು ಯಾವುದೇ ರೀತಿಯಲ್ಲಿ ಪ್ರಾಣಹಾನಿ ಸಂಭವಿಸಿಲ್ಲ.

ದಕ್ಷಿಣದಿಂದ ಬೀಸಿದ ಬಲವಾದ ಗಾಳಿಗೆ ಮಾರುತಿ ರೈಸ್ ಮಿಲ್ಲಿನ ರಸ್ತೆ ಬದಿಯ ಖಾಸಗಿ ತೋಟದಲ್ಲಿದ್ದ ತೆಂಗಿನ ಮರಗಳು ಏಕಾಏಕಿ ಪಕ್ಕದ ವಿದ್ಯುತ್ ತಂತಗಳ ಮೇಲೆ ಬಿದ್ದುದರಿಂದ ಸುಮಾರು ಐದು ವಿದ್ಯುತ್ ಕಂಬಗಳು ನೆಲ್ಲಕುರಳಿದ್ದು ಉಳಿದ ನಾಲ್ಕು ವಿದ್ಯುತ್ ಕಂಬಗಳು ರಸ್ತೆಗೆ ವಾಲಿದೆ. ಕಂಬದಲ್ಲಿದ್ದ ವಿದ್ಯುತ್ ತಂತಿಗಳು ಕಾಂಕ್ರೀಟ್ ರಸ್ತೆಯಲ್ಲಿ ಬಿದ್ದಿದೆ. ಇದರೊಂದಿಗೆ ಸಾಕಷ್ಟು ತೆಂಗಿನ ಮರಗಳು ನೆಲಕ್ಕುರುಳಿದೆ.

ಈ ಘಟನೆಯಿಂದ ವಿದ್ಯುತ್ ಕಂಬಗಳ ಸಹಿತಿ ತೆಂಗಿನಮರಗಳು ನೆಲಕ್ಕುರುಳಿದ್ದರಿಂದ ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ವಿನೋದ್‌ಕುಮಾರ್ ಕೊಳುವೈಲು ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೆಸ್ಕಾಂ ಸಿಬಂದಿಗಳಿಗೆ ಮಾಹಿತಿ ನೀಡಿ, ಸ್ಥಳೀಯ ಯುವಕರ ಸಹಾರದಿಂದ ವಿದ್ಯುತ್ ಕಂಬಗಳ ಹಾಗೂ ತೆಂಗಿನ ಮರಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ಕಂಬಗಳ ಮರುಜೋಡಣೆ ಕಾರ್ಯ ನಡೆದಿದೆ.