ಅನರ್ಕಲಿ ತುಳು ಸಿನಿಮಾದ “ನಾಲ್ ಪದಕುಲು” ಹಾಡು ಬಿಡುಗಡೆ

ಲಕುಮಿ ಸಿನಿ ಕ್ರಿಯೇಷನ್ಸ್‌ನ ಅನರ್ಕಲಿ ತುಳು ಸಿನಿಮಾದ ನಾಲ್ ಪದಕುಲು ಶೀರ್ಷಿಕೆಯ ಹಾಡು ಜಾಂಕರ್ ಮ್ಯೂಸಿಕ್ ಕರಾವಳಿ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿತು.

ಅನರ್ಕಲಿ ತುಳು ಸಿನಿಮಾ ತುಳುನಾಡಿನ ವೇಷ, ಸಂಸ್ಕೃತಿಯನ್ನು ಆಧರಿಸಿ ಹೆಣೆದ ಕಥೆಯಾಗಿದೆ. ಕಟೀಲು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ಇದರಲ್ಲಿ ನಾಲ್ಕು ಹಾಡುಗಳಿವೆ. ಅದರಲ್ಲಿ ನಾಲ್ ಪದಕುಲು ಹಾಡು ಅದ್ಭುತವಾಗಿ ಮೂಡಿಬಂದಿದೆ. ಶೋಭರಾಜ್ ಪಾವೂರು ನಾಯಕ ನಟನಾಗಿ ನಟಿಸಿದ್ದಾರೆ.

ಎಲ್ ಎನ್ ಕಿಶೋರ್ ಡಿ ಶೆಟ್ಟಿ ನಿರ್ಮಾಪಕರಾಗಿದ್ದು, ಲಂಚುಲಾಲ್ ಕೆ ಎಸ್, ಯಶೋದಾ ಸಂಜೀವ ಕೋಟ್ಯಾನ್ ಮತ್ತು ರಜನೀಶ್ ಕೋಟ್ಯಾನ್ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ಮಧುರಾಜ್ ಆರ್ ಜೆ, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ದೀಪಕ್ ರೈ ಪಾಣಾಜೆ, ರವಿ ರಾಮಕುಂಜ ಮುಂತಾದ ಜನಪ್ರಿಯ ನಟರು ನಟಿಸಿದ್ದಾರೆ. ಪ್ರಜ್ವಲ್ ಸುವರ್ಣ ಸಂಕಲನ, ರೋಹಿತ್ ಪೂಜಾರಿ ಸಂಗೀತ, ಅರುಣ್ ರೈ ಪುತ್ತೂರು, ಅನಿಲ್ ಛಾಯಾಗ್ರಹಣಕ್ಕೆ ಸಹಕರಿಸಿದ್ದಾರೆ.

ಒಟ್ಟಿನಲ್ಲಿ ನಾಲ್ ಪದಕುಲು ಹಾಡು ಅದ್ಭುತವಾಗಿ ಮೂಡಿಬಂದಿದ್ದು, ಸಿನಿಮಾ ಪ್ರೇಕ್ಷಕರು ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published.