ಮುಂಬೈ: ಜ.21ರಂದು ಕೋಟಿ ಚೆನ್ನಯ ಸ್ಪೋರ್ಟ್ಸ್ ಮೀಟ್ – 2024
ಬಿಲ್ಲವರ ಎಸೋಸಿಯೇಶನ್ ಮುಂಬಯಿ ವತಿಯಿಂದ ಜ.21ರಂದು ಕೋಟಿ ಚೆನ್ನಯ ಸ್ಪೋರ್ಟ್ಸ್ ಮೀಟ್ 2023-24 ಎಂಬ ಕಾರ್ಯಕ್ರಮವು ಮುಂಬೈನ ಯೂನಿವರ್ಸಿಟಿ ಸ್ಪೋರ್ಟ್ಸ್ ಗ್ರೌಂಡ್ ನ್ಯೂ ಮರೀಸ್ ಲೈನ್ಸ್‌ನಲ್ಲಿ ನಡೆಯಲಿದೆ.
ಈ ಕ್ರೀಡೋತ್ಸವವು ಬೆಳಿಗ್ಗೆ 7.30ರಿಂದ ಸಂಜೆ 5 ಗಂಟೆಯವರೆಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಕ್ರೀಡೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಂಬೈ ಬಿಲ್ಲವ ಅಸೋಸಿಯೇಶನ್‌ನ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಹರಿಕಥಾ ವಿದ್ವಾನ್ ವಿಶ್ವೇಶ ದಾಸ ಕರಿಬೆಟ್ಟು ವಿಶ್ವನಾಥ ಭಟ್ ಆಶೀರ್ವಚನ ನೀಡಲಿದ್ದಾರೆ. ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭದಲ್ಲಿಯೂ ಹಲವಾರು ಗಣ್ಯರು ಭಾಗವಹಿಸಿ ಬಹುಮಾನ ವಿತರಣೆ ನಡೆಯಲಿದೆ.