ಮುಂಡ್ಕೂರು ಕಲ್ಲಿಮಾರಿನಲ್ಲಿ ಪುರಾತನ ನಾಗಕಲ್ಲು ಪತ್ತೆ

ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಕಲ್ಲಿಮಾರ್ ವಿನಲ್ಲಿ ಪುರಾತನ ಕಾಲದ ನಾಗಕಲ್ಲು ಪತ್ತೆಯಾಗಿದೆ. ನಾಗ ಬನದ ಸಮೀಪ ಅಗೆಯುವಾಗ ಈ ಕಲ್ಲು ಪತ್ತೆಯಾಗಿದೆ. ನಾಗಕಲ್ಲು ತುಂಡಾಗಿದ್ದು ಬಹಳ ಪುರಾತನವಾದ ಅಪರೂಪದ ಶಿಲ್ಪ ಕಲೆ ಇದರಲ್ಲಿ ಗೋಚರಿಸುತ್ತಿದೆ. ರವಿಪ್ರಸಾದ್ ಭಟ್ ಸಹಕಾರದಲ್ಲಿ ಈ ಅಪರೂಪದ ಶಿಲ್ಪರೂಪದ ನಾಗಕಲ್ಲು ಪತ್ತೆಯಾಗಿದೆ. ಸುಮಾರು 500 ವರ್ಷಗಳ ಹಿಂದಿನ ಪುರಾತನ ಶಿಲ್ಪ ಕಲೆಯ ಹಾಗೆ ಕಂಡುಬರುತ್ತಿದೆ.

Related Posts

Leave a Reply

Your email address will not be published.