ನಾಗಶ್ರೀ ನಾಗರಕಟ್ಟೆ ಅವರ `ಕೃಷ್ಣ ಸಿಗಲಿಲ್ಲ’ ಕವನ ಸಂಕಲನ ಬಿಡುಗಡೆ, ಗುರುಗಳಿಗೆ ಗೌರವಾರ್ಪಣೆ

ಮೂಡುಬಿದಿರೆ: ಕವಿ, ಶಿಕ್ಷಕಿ ನಾಗಶ್ರೀ ನಾಗರಕಟ್ಟೆ ಅವರ ಚೊಚ್ಚಲ ಕವನ ಸಂಕಲನ `ಕೃಷ್ಣ ಸಿಗಲಿಲ್ಲ‘ ಕೃತಿಯನ್ನು ರಾಜ್ಯ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಅವರು ಮೂಡುಬಿದಿರೆಯ ಎಂಸಿಎಸ್ ಸೊಸೈಟಿಯ ಕಲ್ಪವೃಕ್ಷ ಸಭಾಂಗಣದಲ್ಲಿ ಭಾನುವಾರ ಬಿಡುಗಡೆಗೊಳಿಸಿದರು.


ಕೃತಿ ಪ್ರಕಟಿಸಿರುವ ಅಜೆಕಾರಿನ ಶ್ರೀ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಯ ಮುಖ್ಯಸ್ಥ, ಹಿರಿಯ ಪತ್ರಕರ್ತ ಡಾ. ಶೇಖರ ಅಜೆಕಾರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸೊಸೈಟಿ ಅಧ್ಯಕ್ಷ ಬಾಹುಬಲಿ ಪ್ರಸಾದ್, ಸಾಹಿತಿಗಳಾದ ಸದಾನಂದ ನಾರಾವಿ, ಉಗ್ಗಪ್ಪ ಪೂಜಾರಿ, ಭಂಡಾರಿ ಸಂಘದ ಅಧ್ಯಕ್ಷ ಕೆ.ಎನ್. ಪ್ರಕಾಶ್ ಭಂಡಾರಿ, ಕಿಶೋರ ಬೆಳ್ತಂಗಡಿ, ಆರಾಧನಾ ಸೇವಾ ಸಂಸ್ಥೆಯ ಪದ್ಮಶ್ರೀ ಭಟ್ ನಿಡ್ಡೋಡಿ, ನಾಗಶ್ರೀ ಅವರ ಪತ್ನಿ ಸಂತೋಷ್ ಪಾಲ್ಗೊಂಡಿದ್ದರು.
ಪತ್ರಕರ್ತ ಧನಂಜಯ ಮೂಡುಬಿದಿರೆ ಕೃತಿಯ ಕುರಿತು ಮಾತನಾಡಿದರು. ಮುನಿರಾಜ ರೆಂಜಾಳ ಮತ್ತು ಡಾ. ಶೇಖರ ಅಜೆಕಾರು ಅವರಿಗೆ ಗುರುವಂದನೆ, ಕವಯಿತ್ರಿಯ 26 ಮಂದಿ ಗುರುಗಳು, ಬಾಲಕೃಷ್ಣ ನಾಯಕ್, ಪತ್ರಕರ್ತ ವಿಜಯಕುಮಾರ್ ಹೆಬ್ಬಾರಬೈಲು ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.
ನಂತರ ಪ್ರಿಯಾ ಸುಳ್ಯ ಅವರ ಅಧ್ಯಕ್ಷತೆ, ಶೇಖರ ಅಜೆಕಾರು ಅವರ ನಿರ್ವಹಣೆಯಲ್ಲಿ ನಡೆದ ಕವಿಗೋಷ್ಟಿಯಲ್ಲಿ ಶರಣ್ಯಾ ಬೆಳುವಾಯಿ ಉದ್ಘಾಟನ ಕವಿತೆ ವಾಚಿಸಿದರು. ಬಾಲಕೃಷ್ಣ ಹೆಗ್ಡೆ ಅಜೆಕಾರು, ಮಾಲತಿ ರಮೇಶ ಭಂಡಾರಿ ಕೆಮ್ಮಣ್ಣು, ನವೀನ್ ಕುಲಾಲ್ ಚಿಪ್ಪಾರು, ಮೂಡುಬಿದಿರೆಯ ಜಯಲಕ್ಷ್ಮೀ ಸುಮಂಗಲಾ ಕಿಣಿ, ಮಾನಸ ಪ್ರವೀಣ್ ಭಟ್ ಶಿರ್ತಾಡಿ, ಮಾಲತಿ ರಮೇಶ ಭಂಡಾರಿ ಕೆಮ್ಮಣ್ಣು, ರೇಖಾ ಶಂಕರ್, ಸುನಿಧಿ ಅಜೆಕಾರು ಕವಿಗಳಾಗಿ ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸಿದರು. ಚೈತ್ರಾ ಮಾವಿನಕೊಚ್ಚಿ ಸಭಾ ಕಲಾಪ ನಿರೂಪಿಸಿದರು. ರಿಶಾಂತ್ ತೋಡಾರು ವಂದಿಸಿದರು.