ಮೂಡುಬಿದಿರೆ: ಪಾಲಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿ ನೀರಜಾಕ್ಷಿ ಎಸ್.ಶೆಟ್ಟಿ ಆಯ್ಕೆ
ಮೂಡುಬಿದಿರೆ: ಪಾಲಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ನಿ. ಕೇಮಾರು ಇದರ ಅಧ್ಯಕ್ಷೆಯಾಗಿ ನೀರಜಾಕ್ಷಿ ಎಸ್.ಶೆಟ್ಟಿ ಪುನರಾಯ್ಕೆಯಾಗಿದ್ದಾರೆ.
ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಈ ಹಿಂದಿನ ಎಲ್ಲಾ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೀರಜಾಕ್ಷಿ ಶೆಟ್ಟಿ ಅವರು ಸತತ 5ನೇ ಬಾರಿಗೆ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷೆಯಾಗಿ ಅಮಿತಾ ನಾಯ್ಕ್, ನಿರ್ದೇಶಕರುಗಳಾಗಿ ನಳಿನಾಕ್ಷಿ ಬಿ.ಪೂಜಾರ್ತಿ, ಜ್ಯೋತಿ ಪೂಜಾರ್ತಿ, ಭಾರತಿ ಪೂಜಾರ್ತಿ, ನಳಿನಾಕ್ಷಿ ಕೆ.ಪೂಜಾರ್ತಿ,ಲಲಿತಾ ವಿ.ಪೂಜಾರ್ತಿ, ಸಾವಿತ್ರಿ ಪೂಜಾರ್ತಿ,ಶಾಂತ ಪೂಜಾರ್ತಿ, ಲೀಲಾ ಶೆಟ್ಟಿಗಾರ್,ಲಿಲ್ಲಿ ಪಿಂಟೋ, ಲೀಲಾ ಪೂಜಾರ್ತಿ ಹೀಗೆ 12 ಮಂದಿ ಪುನರಾಯ್ಕೆಯಾಗಿದ್ದಾರೆ.