ನೆಲ್ಯಾಡಿ :ವಿಶ್ವವಿದ್ಯಾನಿಲಯ ಕಾಲೇಜು : ವಿದ್ಯಾರ್ಥಿ ಸಂಘದ ಆಯ್ಕೆ
ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಆಗಿರುವ ನೆಲ್ಯಾಡಿಯ ವಿಶ್ವವಿದ್ಯಾನಿಲಯ ಪದವಿ ಕಾಲೇಜಿನಲ್ಲಿ 2023-24ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಆಯ್ಕೆ ಪ್ರಕ್ರಿಯೆಯು ನಡೆಯಿತು.
ಅಧ್ಯಕ್ಷರಾಗಿ ತೃತೀಯ ವರ್ಷದ ಕಲಾ ವಿಭಾಗದ ವಿದ್ಯಾರ್ಥಿ ಸಂದೀಪ್ ಕುಮಾರ್ ಎಂ.ಬಿ ಕಾರ್ಯದರ್ಶಿಯಾಗಿ ಅನುಪ್ರಿಯ, ಸಹ ಕಾರ್ಯದರ್ಶಿಯಾಗಿ ವನಿತಾ, ಲಲಿತ ಕಲಾ ಸಂಘದ ಕಾರ್ಯದರ್ಶಿಯಾಗಿ ಕೌಶಲ್ಯ ಡಿ.ಬಿ, ಲಲಿತಕಲಾ ಸಂಘದ ಜೊತೆ ಕಾರ್ಯದರ್ಶಿಯಾಗಿ ಮಾಲಿನಿ ಸಿ.ಎ, ಹಾಗೂ ಕ್ರೀಡಾ ಕಾರ್ಯದರ್ಶಿಯಾಗಿ ರಿತೇಶ್ ಆಯ್ಕೆಯಾದರು.
ವಿದ್ಯಾರ್ಥಿ ಸಂಘದ ಸಂಚಾಲಕರು ಹಾಗೂ ಚುನಾವಣಾ ಅಧಿಕಾರಿಯಾಗಿರುವ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಸುರೇಶ್ ಕೆ, ಮತ ಎಣಿಕೆ ಅಧಿಕಾರಿ ಹಾಗೂ ವಿದ್ಯಾರ್ಥಿ ಸಂಘದ ಸದಸ್ಯರಾದ ಇತಿಹಾಸ ವಿಭಾಗದ ಉಪನ್ಯಾಸಕ ಡಾ.ಸೀತಾರಾಮ್ ಪಿ, ಕನ್ನಡ ವಿಭಾಗದ ಉಪನ್ಯಾಸಕ ಡಾ.ನೂರಂದಪ್ಪ ಅವರ ಉಸ್ತುವಾರಿಯಲ್ಲಿ ನಡೆಯಿತು.
ಕಾಲೇಜಿನ ಸಂಯೋಜಕರಾದ ಡಾ.ಸುರೇಶ್ ವಿಜೇತ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು. ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಯೋಜಕರು ಕಾಲೇಜಿನ ಹಿತರಕ್ಷಣೆ, ಶಾಂತಿ ಹಾಗೂ ಅಭಿವೃದ್ಧಿಗೆ ಶ್ರಮಿಸಲು ಕರೆ ನೀಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಶ್ರೀಮತಿ ಶ್ರುತಿ, ಶ್ರೀಮತಿ ಚಂದ್ರಕಲಾ,
ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.