ಮಂಗಳೂರು: ಅಕ್ಷಯ್ ಆರ್. ಶೆಟ್ಟಿಯವರ ‘ಪೆರ್ಗ’ ತುಳು ನಾಟಕ, ‘ಹಿಡಿ ಅಕ್ಕಿಯ ಧ್ಯಾನ’ ಕನ್ನಡ ಕವನ ಸಂಕಲನ ಬಿಡುಗಡೆ

ತುಡರ್ ಪ್ರಕಾಶನದಿಂದ ಪ್ರಕಟಿಸಲಾದ ಅಕ್ಷಯ್ ಆರ್. ಶೆಟ್ಟಿ ಅವರ ‘ಪೆರ್ಗ’ ತುಳು ನಾಟಕ ಹಾಗೂ ‘ಹಿಡಿ ಅಕ್ಕಿಯ ಧ್ಯಾನ’ ಕನ್ನಡ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವು ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆಯಿತು.

ಪೆರ್ಗ ತುಳು ನಾಟಕ ಕೃತಿಯನ್ನು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅವರು ಅನಾವರಣಗೊಳಿಸಿದರು. ಇದೇ ವೇಳೆ ಮಾತನಾಡಿದ ಅವರು, ಲೇಖಕಿ ಅಕ್ಷಯ ಶೆಟ್ಟಿ ಅವರ ಗಮನ ಇರುವುದು ಸಂಸ್ಕøತಿಯನ್ನು ಮರುಪರಿಶೀಲಿಸುವ ಮತ್ತು ಅದನ್ನು ಪರಿಷ್ಕರಿಸುವ ಬಗ್ಗೆ. ಇದರಲ್ಲಿರುವ ಹಾಡುಗಳು ಸಹ ತುಂಬಾ ಅರ್ಥಪೂರ್ಣವಿದೆ. ಇದೊಂದು ತುಳುವಿನ ಸಂಸ್ಕøತಿಯ ತಾತ್ವಿಕ ಚಿಂತನೆಯ ಹೊಸ ಬಗೆಯ ನಾಟಕ ಎಂದು ಹೇಳಿದರು.

ಹಿಡಿ ಅಕ್ಕಿಯ ಧ್ಯಾನ ಕವನ ಸಂಕಲನವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ ಅನಾವರಣಗೊಳಿಸಿದರು. ಇದೇ ವೇಳೆ ಮಾತನಾಡಿದ ಅವರು, ಕನ್ನಡದ ಕಾವ್ಯ ಪರಂಪರೆ ಬೆಳೆಯುವಲ್ಲಿ ಮಾಧ್ಯಮದ ಕೊಡುಗೆ ಅಪಾರ. ಅಕ್ಷಯ ಅವರು ರಚಿಸಿದ ಕವನಗಳೆಲ್ಲಾ ಅರ್ಥಪೂರ್ಣವಾಗಿದೆ ಎಂದರು.

ಈ ಸಂದರ್ಭದಲ್ಲಿ ಲೇಖಕಿ ಅಕ್ಷಯ ಆರ್. ಶೆಟ್ಟಿ, ಕಲ್ಕೂರು ನಾಗೇಶ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.