ನೆಲ್ಯಾಡಿ: ನೂಜಿಬಾಳ್ತಿಲ ಸಿಡಿಲು ಬಡಿದು ಹಾನಿಯಾದ ಮನೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ
ನೆಲ್ಯಾಡಿ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ನಡುವಳಿಕೆ ನೇಮಣ್ಣ ಗೌಡ ಅವರ ಮನೆಗೆ ಸಿಡಿಲು ಬಡಿದುಸಿಡಿಲು ಬಡಿದು ಹಾನಿಗೊಂಡಿರುತ್ತದೆ.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಅವರ ಮನೆಗೆ ಭೇಟಿ ನೀಡಿ ಸಿಡಿಲು ಬಡಿದ ಸ್ಥಳವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳ ಜೊತೆ ಮಾತನಾಡಿ ಸಿಡಿಲಿನಿಂದ ಹಾನಿಯಾದ ಮನೆಗೆ ಸರ್ಕಾರದಿಂದ ಪರಿಹಾರವನ್ನು ಶೀಘ್ರವಾಗಿ ನೀಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ರಾಕೇಶ್ ರೈ ಕೆಡೆಂಜಿ, ಭಾಸ್ಕರ ಗೌಡ ಇಚಿಲಂಪಾಡಿ, ಚಂದ್ರಶೇಖರ ನೂಜಿ, ರವಿಪ್ರಸಾದ್, ಕೃಷ್ಣ ಎಂ ಆರ್, ಜಯಂತ ಕಲ್ಲುಗುಡ್ಡೆ, ಚಂದ್ರವತಿ, ಪ್ರಕಾಶ್ ಎನ್ ಕೆ ಕಡಬ, ರಾಮಚಂದ್ರ ಜಾಲು, ರವಿ, ಲಿಂಗಪ್ಪ ಕಾಣದಬಾಗಿಲು, ಉಮೇಶ್ ಉಪಸ್ಥಿತರಿದ್ದರು.