ನೆಲ್ಯಾಡಿ: ಕಾಡಾನೆ ದಾಳಿ ತಡೆಗಟ್ಟುವ ಬಗ್ಗೆ ತಜ್ಞರಿಂದ ಮಾಹಿತಿ ಹಾಗೂ ಪ್ರಾತ್ಯಕ್ಷತೆ

ನೆಲ್ಯಾಡಿ: ಅರಣ್ಯ ಇಲಾಖೆ ವತಿಯಿಂದ ಇಚ್ಲಂಪಾಡಿ ಗ್ರಾಮದ ಸೈಂಟ್ ಜಾರ್ಜ್ ಅರ್ಥೋಡಾಕ್ಸ್ ಸೀರಿಯನ್ ಚರ್ಚ್‍ನಲ್ಲಿ ನಾಗರಿಕರಿಗೆ ಕಾಡಾನೆಗಳು ತೋಟಕ್ಕೆ ಬರದಂತೆ ತಡೆಗಟ್ಟುವ ಹಾಗೂ ಬಂದರೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡಲಾಯಿತು.

ಅಂತಾರಾಷ್ಟ್ರೀಯ ಮಟ್ಟದ ತಜ್ಞರಾದ ಡಾ.ರುದ್ರಾಧಿತ್ಯ ವಿಕ್ರಂ ಷಾ ರವರು ಮಾಹಿತಿಯನ್ನು ನೀಡಿದರು.

ಕಾರ್ಯಾಗಾರದಲ್ಲಿ ಇಚಿಲಂಪಾಡಿ ಚರ್ಚಿನ ಧರ್ಮಗುರುಗಳು, ಗ್ರಾಮ ಪಂಚಾಯತ್ ಸದಸ್ಯರಾದ ಡೈಸಿ ವರ್ಗೀಸ್, ರೋಯಿ, ಇಚಿಲಂಪಾಡಿ, ನೆಲ್ಯಾಡಿ ಮತ್ತು ನೂಜಿಬಾಳ್ತಿಲ ಗ್ರಾಮದ ನಾಗರಿಕರು ಪಾಲ್ಗೊಂಡು ಮಾಹಿತಿ ಪಡೆದರು.

ಗ್ರಾಮಸ್ಥರ ಪರವಾಗಿ ಚಾಕೋರವರು ಮಾತನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲರಿಗೂ ವಂದಿಸಿದರು. ಉಪವಲಯ ಅರಣ್ಯಾಧಿಕಾರಿಗಳಾದ ಸುನೀಲ್ ಕುಮಾರ್, ಅಜಿತ್ ಕುಮಾರ್, ಅರಣ್ಯ ರಕ್ಷಕರಾದ ದೇವಿಪ್ರಸಾದ್, ಆಕಾಶ್, ಅರಣ್ಯವೀಕ್ಷಕ ಜನಾರ್ಧನ್ ಕಾರ್ಯಗಾರವನ್ನು ನಡೆಸಿಕೊಟ್ಟರು.

Related Posts

Leave a Reply

Your email address will not be published.