ಶಿಶಿಲ: ಮಿಯ್ಯಾರು ರಕ್ಷಿತಾರಣ್ಯದಲ್ಲಿ ಮರ ಕಡಿದು ದಾಸ್ತಾನು-ಓರ್ವನ ಬಂಧನ
ಶಿಶಿಲ: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಮಿಯ್ಯಾರು ರಕ್ಷಿತಾರಣ್ಯದ ಹೇವಾಜೆಯಲ್ಲಿ ಅಕ್ರಮವಾಗಿ ಮರ ಕಡಿದು ದಾಸ್ತಾನು ಮಾಡುತ್ತಿದ್ದಾಗ ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಶಿಶಿಲ ಗ್ರಾಮದ ದೇವಸ ನಿವಾಸಿ ಸೇಸಪ್ಪ ಗೌಡರ ಮಗ ಧರ್ಣಪ್ಪ ಗೌಡ(46) ಎಂಬವರನ್ನು ಬಂಧಿಸಿದ್ದು. ಮತ್ತೊರ್ವ ಆರೋಪಿ ಹೇವಾಜೆ ನಿವಾಸಿ ಅಜಿತ್ ಪರಾರಿಯಾಗಿದ್ದಾನೆ. ಸ್ಥಳದಲ್ಲಿ ಒಂದು ಕಟ್ಟಿಂಗ್ ಮೀಷಿನ್, ಗರಗಸ, ಕಡಿದ ಒಂದು ಬೇಂಗ ಮರ ವಶಪಡಿಸಿಕೊಂಡಿದ್ದು ಒಟ್ಟು ಮೌಲ್ಯ 1 ಲಕ್ಷದ 39ಸಾವಿರ ಎಂದು ಅಂದಾಜಿಸಲಾಗಿದೆ.
ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್.ಕೆ.ಕೆ ಮಾರ್ಗದರ್ಶನಲ್ಲಿ ಕಳೆಂಜ ಶಾಖಾ ಉಪವಲಯ ಅರಣ್ಯಾಧಿಕಾರಿ ಪ್ರಶಾಂತ್, ಉಪವಲಯ ಅರಣ್ಯಾಧಿಕಾರಿ ಭರತ್, ಅರಣ್ಯಪಾಲಕ ಸನತ್, ವಿನಯಚಂದ್ರ, ರಾಜೇಶ್, ಲಿಂಗಪ್ಪ, ಸುನಿಲ್ ನಾಯ್ಕ್, ಚಾಲಕ ಕಿಶೋರ್ ಕಾರ್ಯಾಚರಣೆ ನಡೆಸಿದ್ದರು.