ನೆಲ್ಯಾಡಿ: ಕಾರು ಬಸ್ಸು ಅಪಘಾತ : ಪ್ರಯಾಣಿಕರಿಗೆ ಗಾಯ
ನೆಲ್ಯಾಡಿ: ಬೆಂಗಳೂರಿಂದ ಮಂಗಳೂರಿಗೆ ಬರುತ್ತಿದ್ದ ಕಾರೊಂದು ನಿಂತಿದ್ದ ಬಸ್‌ನ ಹಿಂಬದಿಗೆ ಗುದ್ದಿದ ಘಟನೆ ಶಿರಾಡಿ ಇಂಡಿಯನ್ ಪೆಟ್ರೋಲ್ ಬಂಕ್ ಹತ್ತಿರ ಸಂಭವಿಸಿದೆ.
ಬೆಳಗಿನ ಜಾವವಾದ ಕಾರಣ ಬಸ್ಸು ನಿಂತಿದ್ದು, ಕಾರು ಚಾಲಕನ ಗಮನಕ್ಕೆ ಬಾರದೆ ಇದ್ದುದರಿಂದ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಬೆಂಗಳೂರಿನ ಬನಶಂಕರಿ ಲೇ ಔಟ್‌ನ ಮಹೇಶ್ (28) ,ಅಭಿಷೇಕ್ (30 ), ಮುತ್ತು ರಾಜ್( 30 ), ನವೀನ್ (29) ಎಂದು ಗುರುತಿಸಲಾಗಿದೆ. ಮಹೇಶ್ ಎಂಬುವರಿಗೆ ಕಣ್ಣು ಮತ್ತು ತಲೆಯ ಭಾಗಕ್ಕೆ ಗಾಯಗಳಾಗಿವೆ. ಇನ್ನುಳಿದಂತೆ ಇತರರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಶಿರಾಡಿಯ 108 ಆಂಬುಲೆನ್ಸ್ ನಲ್ಲಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.