ನೆಲ್ಯಾಡಿ: ಹೊಸಮಜಲುನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಜೇಸಿಐ ನೆಲ್ಯಾಡಿ ಇದರ ಆಶ್ರಯದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋ.ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೌಕ್ರಾಡಿ, ವರ್ತಕರ ಹಾಗೂ ಕೈಗಾರಿಕಾ ಸಂಘ ಕೌಕ್ರಾಡಿ-ನೆಲ್ಯಾಡಿ, ಅಶ್ವತ್ಥ ಗೆಳೆಯರ ಬಳಗ ಹೊಸಮಜಲು, ಕೌಕ್ರಾಡಿ ಗ್ರಾ.ಪಂ.ಹಾಗೂ ಹೊಸಮಜಲು ಸರಕಾರಿ ಹಿ.ಪ್ರಾ.ಶಾಲಾ ಶಾಲಾಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಸುಳ್ಯ ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಕಾರ್ಯಾಗಾರ ಹಾಗೂ ಉಚಿತ ಔಷಧಿ ವಿತರಣಾ ಶಿಬಿರ ಮಾ.17ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ ತನಕ ಹೊಸಮಜಲು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು ಉದ್ಘಾಟಿಸಿ ಮಾತನಾಡಿದ ಅವರು ನಾವುಗಳು ಆರೋಗ್ಯವಂತರಾಗಿರಲು, ಆರೋಗ್ಯವಂತರಾಗಿದ್ದೇವೆ ಎಂದು ತಿಳಿಯಲು ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಈ ರೀತಿಯಾದ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುವುದು ಅತಿ ಅವಶ್ಯಕವಾಗಿದೆ ಎಂದರು.
ನೆಲ್ಯಾಡಿ ಜೇಸಿಐ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಅಧ್ಯಕ್ಷತೆ ವಹಿದ್ದರು. ವೇದಿಕೆಯಲ್ಲಿ ಸುಳ್ಯ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯದ ಡಾ.ವಿಘ್ನೇಶ್ ಶ್ವಾಸಕೋಶ ತಜ್ಞರು, ಸತೀಶ್ ಕೆ.ಎಸ್ ಅಧ್ಯಕ್ಷರು ವರ್ತಕ ಮತ್ತು ಕೈಗಾರಿಕಾ ಸಂಘ ನೆಲ್ಯಾಡಿ- ಕೌಕ್ರಾಡಿ, ವಿಜೇಶ್ ಜೈನ್ ವಲಯ ಮೇಲ್ವಿಚಾರಕರು, ಗ್ರಾಮಾಭಿವೃದ್ಧಿ ನೆಲ್ಯಾಡಿ ವಲಯ, ವಂದನ್ ಕುಮಾರ್ ಅಧ್ಯಕ್ಷರು ಅಶ್ವತ್ಥ ಗೆಳೆಯರ ಬಳಗ ಹೊಸಮಜಲು-ಕೌಕ್ರಾಡಿ, ಶ್ರೀಮತಿ ಪ್ರೇಮ ಮುಖ್ಯೋಪಾಧ್ಯಾಯನಿ ಸ.ಹಿ.ಪ್ರಾ.ಶಾಲೆ ಹೊಸಮಜಲು, ಬಾಲಕೃಷ್ಣ ಗೌಡ ಅಧ್ಯಕ್ಷರು ಪ್ರಗತಿ ಬಂಧು ಒಕ್ಕೂಟ ಕೌಕ್ರಾಡಿ, ಆಶೀಕ್ ಇಸ್ಮಾಯಿಲ್ ಅಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ ಸ.ಹಿ.ಪ್ರಾ. ಶಾಲೆ ಹೊಸಮಜಲು ಉಪಸ್ಥಿತರಿದ್ದರು.
ರವೀಂದ್ರ.ಟಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು, ನಮಿತಾ ಎಸ್ ಶೆಟ್ಟಿ ಪ್ರಾರ್ಥಿಸಿದರು, ವಿನ್ಯಾಸ್ ಬಂಟ್ರಿಯಾಲ್ ಜೇಸಿವಾಣಿ ವಾಚಿಸಿದರು, ಸತೀಶ್ ಕೆ.ಎಸ್ ಸ್ವಾಗತಿಸಿದರು, ಜಯಾನಂದ ಬಂಟ್ರಿಯಾಲ್ ನಿರೂಪಿಸಿ ವಂದಿಸಿದರು.
175ಕ್ಕಿಂತ ಅಧಿಕ ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.