ಇಂದಿರಾಗಾಂಧಿ ಹೇರಿದ ತುರ್ತುಪರಿಸ್ಥಿತಿಯಿಂದ ದೇಶಕ್ಕೆ ಮಾರಕವಾಗಿರಲಿಲ್ಲ : ಪುತ್ತೂರಿನಲ್ಲಿ ಕಾಂಗ್ರೆಸ್ ಮುಖಂಡೆ ದಿವ್ಯಪ್ರಭಾ ಚಿಲ್ತಡ್ಕ ಹೇಳಿಕೆ

ಪುತ್ತೂರು: ದೇಶದಲ್ಲಿ ಇಂದಿರಾಗಾಂಧಿ ಹೇರಿದ ತುರ್ತುಪರಿಸ್ಥಿತಿ ಜನತೆಗೆ ಕರಾಳವಾಗಿರಲಿಲ್ಲ ಎಂದು ಕಾಂಗ್ರೇಸ್ ಮುಖಂಡೆ ದಿವ್ಯಪ್ರಭಾ ಚಿಲ್ತಡ್ಕ ಹೇಳಿದರು.ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿರೋಧ ಪಕ್ಷವಾದ ಬಿಜೆಪಿ ದೇಶದ ಉಕ್ಕಿನ ಮಹಿಳೆ ಎಂದೇ ಕರೆಯಲ್ಪಡುವ ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿಯನ್ನು ಕರಾಳದಿನ ಎಂದು ಬಿಂಬಿಸುತ್ತಿದೆ. ಆದರೆ ಅದು ಕರಾಳದಿನವಾಗಿರಲಿಲ್ಲ. ಇಂದಿರಾ ಗಾಂಧಿ ಸರಕಾರ ಉರುಳಿದ ಸಮಯದಲ್ಲಿ ವಿರೋಧ ಪಕ್ಷಗಳು ದೇಶದಲ್ಲಿ ದೊಂಬಿ, ಲೂಟಿ ಮೊದಲಾದ ಕೃತ್ಯಗಳಲ್ಲಿ ತೊಡಗಿದ್ದವು. ಈ ಸಮಯದಲ್ಲಿ ದೇಶವನ್ನು ನಿಯಂತ್ರಿಸುವ ಕಾರಣಕ್ಕಾಗಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದಾರೆ. ಆದರೆ ಅದು ತುರ್ತುಪರಿಸ್ಥಿತಿಯೂ ಅಲ್ಲ, ಅದು ರಾಷ್ಟ್ರಪತಿ ಆಡಳಿತವಾಗಿತ್ತು ಎಂದರು.