ಮಂಗಳೂರು: ಐಷಾರಾಮಿ ಸೆವೆನ್ ಸೀಸ್ ನ್ಯಾವಿಗೇಟರ್ ಪ್ರವಾಸಿ ಹಡಗು
ನವಮಂಗಳೂರು ಬಂದರಿಗೆ ಐಷಾರಾಮಿ ಸೆವೆನ್ ಸೀಸ್ ನ್ಯಾವಿಗೇಟರ್ ಪ್ರವಾಸಿ ಹಡಗು ಆಗಮಿಸುವುದರೊಂದಿಗೆ ಈ ಬಾರಿಯ ಕ್ರೋಸ್ ಸೀಸನ್ ಅರಂಭಗೊಂಡಿತು. ನಾರ್ವೆಯ ಒಡೆತನದ, ಬಹಾಮಾಸ್ ಧ್ವಜ ಹೊಂದಿದ್ದು 500 ಪ್ರಯಾಣಿಕರು ಮತ್ತು 350 ಸಿಬಂದಿಯನ್ನು ಹೊಂದಿದೆ.
173 ಮೀಟರ್ ಉದ್ದವಿರುವ ಈ ಹಡಗು ಆಗಿದ್ದು, 28,803 ಟನ್ ಭಾರ, ಮತ್ತು 7.5 ಮೀಟರ್ ಆಳವಿದೆ. ಹಡಗಿನಿಂದ ಇಳಿದ ಕ್ರೂಸ್ ಪ್ರಯಾಣಿಕರಿಗೆ ಚೆಂಡೆ ಮತ್ತು ಯಕ್ಷಗಾನ, ಭರತನಾಟ್ಯ ಪ್ರದರ್ಶನದೊಂದಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.
ಪ್ರವಾಸಿಗರು ಈ ಕರ್ನಾಟಕದ ಕಲಾ ಪ್ರಕಾರದ ಜತೆ ಫೋಟೋಗಳನ್ನು ತೆಗೆಸಿಕೊಂಡು ಸಂಭ್ರಮಿಸಿದರು.ನವಮಂಗಳೂರು ಬಂದರಿನ ಅಧ್ಯಕ್ಷರು ಡಾ| ಎ.ವಿ. ರಮಣ ಅವರು ಹಡಗಿನ ಕ್ಯಾಪ್ಟನ್‍ಗೆ ಸ್ಮರಣಿಕೆ ನೀಡುವ ಮೂಲಕ ಹಡಗು ಪ್ರವಾಸೋದ್ಯಮ ಋತುವಿಗೆ ಚಾಲನೆ ನೀಡಿದರು. ಉಪಾಧ್ಯಕ್ಷರು ಮತ್ತು ಇತರ ಹಿರಿಯ ಬಂದರು ಅಧಿಕಾರಿಗಳು ಉಪಸ್ಥಿತರಿದ್ದರು.