ಬೆಳಗಾವಿ ; ಬಕೆಟ್ ಜನತಾ ಪಾರ್ಟಿ ಬಿಜೆಪಿ – ಕಾಂಗ್ರೆಸ್ ಪಕ್ಷದಿಂದ ಲೇವಡಿ
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿಯ ವಿಶ್ವನಾಥ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಅಶೋಕ್‍ರನ್ನು ಬಕೆಟ್ ಹಿಡಿದುಕೊಂಡೇ ರಾಜಕೀಯ ಮಾಡುವವರು ಎಂದು ಟೀಕಿಸಿರುವುದು ಬಿಜೆಪಿಯ ಬಕೆಟ್ ರಾಜಕೀಯವನ್ನು ಬಹಿರಂಗಗೊಳಿಸಿದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷ ಗೇಲಿ ಮಾಡಿದೆ.
ಬಿಜೆಪಿಯ ಎಸ್. ಆರ್. ವಿಶ್ವನಾಥ್ ಹೇಳಿಕೆಯನ್ನು ಪ್ರಸ್ತಾಪಿಸಿ, ಅಶೋಕ್ ಅವರೆ ಪ್ರತಿಪಕ್ಷದ ನಾಯಕ ಸ್ಥಾನ ಹಿಡಿಯಲು ಯಾರಿಗೆ ಬಕೆಟ್ ಹಿಡಿದಿರಿ ಎಂದು ರಾಜ್ಯ ಕಾಂಗ್ರೆಸ್ ಪಕ್ಷವು ಜಾಲ ತಾಣ ಪೋಸ್ಟ್ ಮೂಲಕ ಪ್ರಶ್ನಿಸಿದೆ. ಭ್ರಷ್ಟ ಜನತಾ ಪಾರ್ಟಿ, ಬ್ಲಾಕ್ಮೇಲ್ ಜನತಾ ಪಾರ್ಟಿ, ಬ್ಲೂಬಾಯ್ಸ್ ಜನತಾ ಪಾರ್ಟಿ ಮೊದಲಾದ ಹೆಸರನ್ನು ಬಿಜೆಪಿಗೆ ಬಿಜೆಪಿಯವರೇ ನೀಡಿದ್ದಾರೆ. ಅದಕ್ಕೆ ಈಗ ಬಕೆಟ್ ಜನತಾ ಪಾರ್ಟಿ ಎನ್ನುವ ಹೆಸರು ಸೇರಿದೆ ಎಂದೂ ಕಾಂಗ್ರೆಸ್ ಕಿಚಾಯಿಸಿದೆ.