ಐಸಿಸ್ ಸಂಚು ಪ್ರಕರಣ, ಎನ್‍ಐಎ ದಾಳಿ


ಎನ್‍ಐಎ- ರಾಷ್ಟ್ರೀಯ ತನಿಖಾ ಏಜೆನ್ಸಿಯವರು ಐಎಸ್‍ಐಎಸ್ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ 44 ಕಡೆ ದಾಳಿ ನಡೆಸಿ, ಹಲವರನ್ನು ಪ್ರಶ್ನಿಸಿ, 13 ಜನರನ್ನು ಡಿಸೆಂಬರ್ 9ರ ಶನಿವಾರ ಬೆಳಿಗ್ಗೆ ಬಂಧಿಸಿದ್ದಾರೆ.
ಪೂನಾದ ಎರಡು ಕಡೆ, ಮುಂಬಯಿ ಹೊರ ವಲಯದ ಥಾಣೆಯ 9 ಕಡೆ, ಥಾಣೆ ಹೊರ ವಲಯದ 31 ಕಡೆ, ಬಾಯಂದರ್‍ನ ಒಂದು ಕಡೆ ಮತ್ತು ಕರ್ನಾಟಕದ ಬಡಗಣ ಭಾಗದ ಕೆಲವೆಡೆ ಶನಿವಾರ ಏಕ ಕಾಲಕ್ಕೆ ದಾಳಿ ಮಾಡಿದರು. ಅಲ್ ಕೈದಾ ಜೊತೆಗೆ ಐಸಿಸ್ ಉಗ್ರ ದಾಳಿ ಸಂಘಟನೆಯಲ್ಲಿ ತೊಡಗಿದೆ ಎಂಬ ಸುದ್ದಿಯ ಮೇಲೆ ಈ ದಾಳಿಗಳು ನಡೆದವು

Related Posts

Leave a Reply

Your email address will not be published.