ನಂತೂರಿನ ನಿಟ್ಟೆ ಡಾ. ಶಂಕರ್ ಅಡ್ಯಂತಾಯ ಪಿಯು ಕಾಲೇಜು- ಕನ್ನಡ ರಾಜ್ಯೋತ್ಸವದ ಸಂಭ್ರಮ

ಹೆತ್ತ ತಾಯಿ ಹಾಗೂ ಹೊತ್ತ ಭೂಮಿ ಸ್ವರ್ಗಕ್ಕಿಂತ ಮಿಗಿಲು. ನಮ್ಮ ನಾಡು ನುಡಿ ಸಂಸ್ಕöÈತಿಗಳ ಬಗ್ಗೆ ನಾವು ಎಲ್ಲೇ ಇದ್ದರೂ ಹೃದಯದೊಳಗೆ ಪ್ರೀತಿ ಇರಬೇಕು. ನಮ್ಮ ನಾಡಿಗಾಗಿ ದುಡಿದ ಹತ್ತು ಹಲವು ಚೇತನಗಳ ಆದರ್ಶ ನಮಗೆ ದಾರಿದೀಪವಾಗಲಿ. ಮಾತೃಭಾಷೆ ಪ್ರೇಮ ಎಂದರೆ ಅನ್ಯ ಭಾಷೆಗಳನ್ನು ದ್ವೇಷಿಸುವುದು ಎಂದು ಅರ್ಥವಲ್ಲ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳಿಂದ ಕನ್ನಡ ಉಳಿಸಿ ಬೆಳೆಸಲು ಸಾಧ್ಯ.” ಎಂದು ನಂತೂರಿನ ನಿಟ್ಟೆ ಡಾ. ಶಂಕರ ಅಡ್ಯಂತಾಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾಕ್ಟರ್ ನವೀನ್ ಶೆಟ್ಟಿ. ಕೆ ನುಡಿದರು.


ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಉಪ ಪ್ರಾಂಶುಪಾಲರಾದ ಶ್ರೀಮತಿ ಅನ್ನಪೂರ್ಣ ನಾಯಕ್,ಕನ್ನಡ ಉಪನ್ಯಾಸಕ ಟಿ.ವಿ. ಗಿರಿ, ಎನ್‌ಎಸ್‌ಎಸ್ ವಿದ್ಯಾರ್ಥಿ ನಾಯಕರಾದ ಸುದೀಪ್, ಸಾಕ್ಷಿ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭ ಉಪಸ್ಥಿತರಿದ್ದರು. ಸಂಸ್ಥೆಯ ಎನ್‌ಎಸ್‌ಎಸ್ ಘಟಕ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ ಸ್ವಾಗತಿಸಿದರು. ಕುಮಾರಿ ಅನಿಷಾ ಜಾದವ್ ವಂದಿಸಿದರು. ನಂತರ ಕನ್ನಡ ನಾಡು, ನುಡಿ, ಸಂಸ್ಕöÈತಿಯನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.
