“Nitte Nexus 2025” ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಮಾವೇಶ

WENAMITAA (NMAMIT ಹಳೆಯ ವಿದ್ಯಾರ್ಥಿಗಳ ಸಂಘ) ಮತ್ತು Nitte Mahalinga Adyanthaya Memorial Institute of Technology (NMAMIT), ನಿಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಜಾಗತಿಕ ಹಳೆಯ ವಿದ್ಯಾರ್ಥಿ ಸಮಾವೇಶ – “Nitte Nexus 2025” ಅನ್ನು ಡಿಸೆಂಬರ್ 20, 2025, ಸಂಜೆ 4 ಗಂಟೆಯಿಂದ, ಮುಲ್ಕಿಯ ಸುಂದರ ರಾಮ ಶೆಟ್ಟಿ ಕನ್ವೆನ್ಷನ್ ಸೆಂಟರ್­ನಲ್ಲಿ ಆಯೋಜಿಸಲಾಗಿದೆ.

1986ರಲ್ಲಿ ಸ್ಥಾಪಿತವಾದ NMAMIT ತನ್ನ 40 ವರ್ಷಗಳ ಸೇವೆ ಮತ್ತು ಶ್ರೇಷ್ಠತೆಗೆ ಕಾಲಿಡುತ್ತಿರುವ ಸಂದರ್ಭದಲ್ಲಿ, ವಿಶ್ವದಾದ್ಯಂತ ವಿವಿಧ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 25,000ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳ ಬಲಿಷ್ಠ ಸಮುದಾಯವನ್ನು ಹೊಂದಿದೆ. ಹಳೆಯ ಸ್ನೇಹಿತರೊಂದಿಗೆ ಪುನರ್‌ಸಂಪರ್ಕ, ವೃತ್ತಿ ನೆಟ್ವರ್ಕಿಂಗ್, ಸ್ಮೃತಿಗಳ ಪುನರ್‌ಅನುಭವ, ಹಾಗೂ ಉದ್ಯಮ–ಶೈಕ್ಷಣಿಕ ಸಹಯೋಗ ಬೆಳೆಸುವ ಉದ್ದೇಶದಿಂದ ಈ ಜಾಗತಿಕ ಸಮಾವೇಶವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ನಿಟ್ಟೆ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರು ಹಾಗೂ Nitte Deemed to be University ಯ ಚಾನ್ಸಲರ್ ಶ್ರೀ ಎನ್. ವಿನಯ್ ಹೆಗ್ಡೆ ಅವರು ಉದ್ಘಾಟಿಸಲಿದ್ದಾರೆ. ಅವರೊಂದಿಗೆ NMAMIT ಹಾಗೂ Nitte University‌ನ ಇತರ ಗಣ್ಯರು ಸಹ ಈ ಸಮಾವೇಶಕ್ಕೆ ಉಪಸ್ಥಿತರಾಗುವರು.ವಿಶ್ವದ ಅನೇಕ ಭಾಗಗಳಿಂದ ಸುಮಾರು 1000 ಹಳೆಯ ವಿದ್ಯಾರ್ಥಿಗಳು ಈ ಬಹುನಿರೀಕ್ಷಿತ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಂಸ್ಥೆಗೆ 25 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಹಿರಿಯ ಬೋಧಕ ವೃಂದ ಮತ್ತು ನಿವೃತ್ತ ಸಿಬ್ಬಂದಿಗಳನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಆಹ್ವಾನಿಸಲಾಗಿದೆ.

ನಿಟ್ಟೆ NMAMIT ಹಳೆಯ ವಿದ್ಯಾರ್ಥಿಗಳು ಸಂಸ್ಥೆಯ 40 ವರ್ಷದ ಸಾಧನೆ ಮತ್ತು ಪರಂಪರೆಯನ್ನು ಒಗ್ಗಟ್ಟಿನಿಂದ ಆಚರಿಸುವ ಈ ಸ್ಮರಣೀಯ ಕ್ಷಣದಲ್ಲಿ ಭಾಗವಹಿಸಲು ಆಯೋಜಕರು ಹಾರ್ದಿಕವಾಗಿ ಆಹ್ವಾನಿಸುತ್ತಿದ್ದಾರೆ.
ನೋಂದಣಿ: www.nittenexus2025.com

ಪ್ರೆಸ್ ಮೀಟ್‌ನಲ್ಲಿ ಮುಲ್ಕಿ ಜೀವನ್ ಕೆ. ಶೆಟ್ಟಿ (ಅಧ್ಯಕ್ಷರು – WENAMITAA), ಅವಿನಾಶ ಕೃಷ್ಣ ಕುಮಾರ್ (ಉಪಾಧ್ಯಕ್ಷರು – WENAMITAA), ಸಂದೀಪ್ ರಾವ್ ಇಡ್ಯ (ಕನ್ವೀನರ್ – Nitte Nexus 2025), ಮಹೇಶ್ ಕಾಮತ್ (ಸಹ-ಕನ್ವೀನರ್) ಮತ್ತು ಮೇಘನಾ ಶೆಟ್ಟಿ (ಸಹ-ಕನ್ವೀನರ್) ಉಪಸ್ಥಿತರಿದ್ದರು.

Related Posts

Leave a Reply

Your email address will not be published.