ಮಂಡೆಕೋಲು:ಎನ್.ಎಸ್.ಎಸ್ .ಸೇವಾ ಸಂಗಮ ಟ್ರಸ್ಟ್ (ರಿ.) ನಿಂದ ಮಹಿಳಾ ದಿನಾಚರಣೆ ಮತ್ತು” ನಾನೂ ನಾಯಕಿ” ತರಬೇತಿ
ಕೆವಿಜಿ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ವಿದ್ಯಾರ್ಥಿಗಳ ಸಂಘ “ಎನ್.ಎಸ್.ಎಸ್.ಸೇವಾ ಸಂಗಮ ಟ್ರಸ್ಟ್ (ರಿ.)” ಯ ದಶಮಾನೋತ್ಸವದ ಅಂಗವಾಗಿ ಮಹಿಳಾ ದಿನಾಚರಣೆ ಮತ್ತು” ನಾನೂ ನಾಯಕಿ’ ಎಂಬ ವಿಷಯದ ಬಗ್ಗೆ ತರಬೇತಿ ಕಾರ್ಯಕ್ರಮವು ಮಂಡೆಕೋಲು ಗ್ರಾಮ ಪಂಚಾಯತ್ ಮತ್ತು ಗ್ರಂಥಾಲಯದ ಸಹಯೋಗದೊಂದಿಗೆ ನಡೆಯಿತು.

ಎನ್ಎಸ್ಎಸ್ ಸೇವಾ ಸಂಗಮ ಟ್ರಸ್ಟ್ ನ ಗೌರವಾಧ್ಯಕ್ಷ ಬಾಲಕೃಷ್ಣ ಬೊಳ್ಳೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ, ಗ್ರಂಥಾಲಯದ ಮೇಲ್ವಿಚಾರಕಿ ಸಾವಿತ್ರಿ ರಾಮ್ ಕಣೆ ಮರಡ್ಕ,ಗ್ರಾಪಂಚಾಯತಿ ಸದಸ್ಯೆ ಗೀತಾ, ಸಂಪನ್ಮೂಲ ವ್ಯಕ್ತಿ ಡಾ.ಅನುರಾಧಾ ಕುರುಂಜಿ , ಟ್ರಸ್ಟ್ ನ ಕಾರ್ಯದರ್ಶಿ ವಿಶ್ವಕಿರಣ್ ಉಪಸ್ಥಿತರಿದ್ದರು. ಟ್ರಸ್ಟ್ ನ ಕಾರ್ಯಕಾರಿ ಅಧ್ಯಕ್ಷ ವಿಜೇತ್ ಶಿರ್ಲಾಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಘಟನಾ ಕಾರ್ಯದರ್ಶಿ ಸುಜಿತ್ ಎಂ ಎಸ್ ವಂದಿಸಿದರು ಎನ್.ಎಸ್.ಎಸ್ ಘಟಕದ ನಾಯಕಿ ಅಪೂರ್ವ ಕಾರ್ಯಕ್ರಮ ನಿರೂಪಿಸಿದರು.
ಸಭಾಕಾರ್ಯಕ್ರಮದ ನಂತರ ವ್ಯಕ್ತಿತ್ವ ವಿಕಸನ ತರಬೇತುದಾರೆ ಡಾ. ಅನುರಾಧಾ ಕುರುಂಜಿ ” ನಾನೂ ನಾಯಕಿ” ಎಂಬ ವಿಷಯದಲ್ಲಿ ತರಬೇತಿ ನೀಡಿದರು. ಆ ನಂತರ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ : ಸಾಯಂಕಾಲ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್ ಬಹುಮಾನ ವಿತರಣೆ ಮಾಡಿದರು. ವೇದಿಕೆಯಲ್ಲಿ ಡಾ.ಅನುರಾಧಾ ಕುರುಂಜಿ, ಗ್ರಾಮ ಪಂಚಾಯತ್ ಸದಸ್ಯೆ ಗೀತಾ, ಸಾವಿತ್ರಿರಾಮ್ ಕಣೆಮರಡ್ಕ, ವಿಜೇತ್ ಶಿರ್ಲಾಲ್, ವಿಶ್ವಕಿರಣ್, ಸುಜಿತ್ ಎಂ.ಎಸ್ ಮೊದಲಾದವರು ಉಪಸ್ಥಿತರಿದ್ದರು.

















