ಎನ್‌ಎಸ್‌ಎಸ್ ಸೇವಾ ಸಂಗಮದ ದಶಮಾನೋತ್ಸವ ಲೋಗೋ ಬಿಡುಗಡೆ

ಸುಳ್ಯ: ಎನ್‌ಎಸ್‌ಎಸ್ ಸೇವಾ ಸಂಗಮ ಟ್ರಸ್ಟ್ (ರಿ), ಸುಳ್ಯ ಇದರ ದಶಮಾನೋತ್ಸವ ಕಾರ್ಯಕ್ರಮವು ಜನವರಿ 2 ಮತ್ತು 3ರಂದು ಮುಳ್ಯ ಅಟ್ಲೂರು ಶಾಲೆಯಲ್ಲಿ ನಡೆಯಲಿದ್ದು, ಇದರ ಅಂಗವಾಗಿ ದಶಮಾನೋತ್ಸವದ ಲೋಗೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಂತಮಂಗಲದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷರಾದ ಬಾಲಕೃಷ್ಣ ಬೊಳ್ಳೂರು ವಹಿಸಿದ್ದರು. ಗೌರವ ಸಲಹೆಗಾರರಾದ ಜಯಪ್ರಕಾಶ್ ಕಲ್ಲುಗದ್ದೆ, ಚಂದ್ರಶೇಖರ ಬಿಳಿನಲೆ, ಡಾ. ಅನುರಾಧ ಕುರುಂಜಿ, ಫಾಲಚಂದ್ರ ವೈ.ವಿ. ಹಾಗೂ ಶಾಲೆಯ ಮುಖ್ಯಗುರು ಸ್ನೇಹಲತಾ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.

ಸೇವಾ ಸಂಗಮದ ರಕ್ಷಿತ್ ಬೊಳ್ಳೂರು, ಹೇಮನಾಥ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು. ಸುಜಿತ್ ಎಂ.ಎಸ್. ಸ್ವಾಗತಿಸಿ, ಆಶಾ ಕೃಷ್ಣಾನಂದ ಅಂಬೆಕಲ್ಲು ವಂದಿಸಿದರು. ದೀಕ್ಷಿತ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.