ವಿಟ್ಲ : ಜನ್ಮದಿನೋತ್ಸವ, ಗ್ರಾಮೋತ್ಸವ-2023 ಗುರುವಂದನ-ಸೇವಾ ಸಂಭ್ರಮ

ತಾನು ಯಾರೆಂದು ಅರಿತು ಬಾಳಿದಾಗ ಅದು ನಿಜವಾದ ಬದುಕಾಗುತ್ತದೆ. ನಮ್ಮೊಳಗಿನ ಕೆಟ್ಟದ್ದನ್ನು ಬಿಡಬೇಕು. ಸಮಾಜದ ಋಣ ನಮ್ಮ ಮೇಲಿದೆ. ಅದನ್ನು ತೀರಿಸುವ ಕೆಲಸವಾಗಬೇಕು. ಹಿರಿಯರಿಗೆ ಗೌರವ ಕೊಡುವ ಮನಸ್ಸು ನಮ್ಮದಾಗಬೇಕು. ಸನಾತನವನ್ನು ಮರೆಯದಿರೋಣ. ಹಿರಿಯರನ್ನು ಮರೆತರೆ ಅಪಾಯ ಖಂಡಿತ. ಜನ್ಮದಿನೋತ್ಸವದ ಆಚರಣೆ ರಾಷ್ಟ್ರೋತ್ತಾನಕ್ಕೆ ಮುನ್ನುಡಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಆ.8ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ವತಿಯಿಂದ ನಡೆದ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ, ಗ್ರಾಮೋತ್ಸವ 2023 ಗುರುವಂದನ-ಸೇವಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಮಾತನಾಡಿದರು.ಇದೇ ಸಂದರ್ಭದಲ್ಲಿ ಮುಂಬಯಿ ಹೇರಂಬ ಕೆಮಿಕಲ್ ಇಂಡಸ್ಟೀಸ್ ಅಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರು ಕನ್ಯಾನರವರಿಗೆ ಶ್ರೀಗಳು ‘ಧಾನಸಿರಿ’ ಬಿರುದು ಪ್ರಧಾನ ಮಾಡಿದರು. ಮೂಡಬಿದರೆ ಆಳ್ವಾಸ್‍ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರವರಿಗೆ ಶ್ರೀಗಳು ‘ವಿದ್ಯಾಸಿರಿ’ ಬಿರುದು ಪ್ರಧಾನ ಮಾಡಿದರು. ಸಂಗೀತ ನಿರ್ದೇಶಕ ಶಂಕರ ಶ್ಯಾನುಬೋಗ್ ರವರಿಗೆ ಶ್ರೀಗಳು ‘ಗಾನಸಿರಿ’ ಬಿರುದು ಪ್ರಧಾನ ಮಾಡಿದರು. ಬರೋಡ ಶಶಿಕ್ಯಾಟರಿಂಗ್ ಸರ್ವಿಸಸ್ ಆಡಳಿತ ನಿರ್ದೇಶಕ ಶಶಿಧರ ಬಿ. ಶೆಟ್ಟಿ ಬರೋಡ ರವರಿಗೆ ಶ್ರೀಗಳು ‘ಸೇವಾಸಿರಿ’ ಬಿರುದು ಪ್ರಧಾನ ಮಾಡಿದರು.

ಮೂಡಬಿದರೆ ಆಳ್ವಾಸ್‍ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರವರು ‘ವಿದ್ಯಾಸಿರಿ’ ಬಿರುದು ಸ್ವೀಕರಿಸಿ ಮಾತನಾಡಿ ಪ್ರೀತಿ ವಿಶ್ವಾಸದ ಸೆಲೆ ಒಡಿಯೂರು ಶ್ರೀಗಳು. ಧಾರ್ಮಿಕತೆಯ ಜೊತೆಗೆ ಭಾಷೆಯ ಚಿಂತನೆಯೊಂದಿಗೆ ಸಮಾಜ ಕಟ್ಟಿದ ಯತಿಗಳಿವರು. ಧಾನ ಧರ್ಮ ಮಾಡುವ ಮನಸ್ಸು ನಮ್ಮದಾಗಲಿ. ನಿತ್ಯ ನಿರಂತರ ಕ್ಷೇತ್ರ ಏಳಿಗೆಯಲ್ಲಿ ನಾವು ಕೈ ಜೋಡಿಸುವುದಾಗಿ ಅವರು ಭರವಸೆ ನೀಡಿದರು.

ಮುಂಬಯಿ ಹೇರಂಬ ಕೆಮಿಕಲ್ ಇಂಡಸ್ಟೀಸ್ ಅಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ‘, ಸಂಗೀತ ನಿರ್ದೇಶಕ ಶಂಕರ ಶ್ಯಾನುಬೋಗ್ , ಬರೋಡ ಶಶಿಕ್ಯಾಟರಿಂಗ್ ಸರ್ವಿಸಸ್ ಆಡಳಿತ ನಿರ್ದೇಶಕ ಶಶಿಧರ ಬಿ. ಶೆಟ್ಟಿ ಬರೋಡ ಶುಭ ಹಾರೈಸಿದರು.

ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಮುಂಬಯಿ ಸಮಿತಿ ಅಧ್ಯಕ್ಷ ವಾಮಯ್ಯ ಬಿ. ಶೆಟ್ಟಿ, ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲೋಕನಾಥ ಜಿ. ಶೆಟ್ಟಿ, ಕೋಶಾಧಿಕಾರಿಗಳಾದ ಎ. ಸುರೇಶ್ ರೈ, ಎ. ಅಶೋಕ್ ಕುಮಾರ್, ಒಡಿಯೂರು ಶ್ರೀ ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ ಉಪಸ್ಥಿತರಿದ್ದರು.

ಜನ್ಮದಿನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮ:

ಶ್ರೀಗಳ ಜನ್ಮದಿನೋತ್ಸವ – ಗ್ರಾಮೋತ್ಸವದ ಅಂಗವಾಗಿ ಬೆಳಗ್ಗೆ 8ಕ್ಕೆ ಶ್ರೀ ಗಣಪತಿ ಹವನ, ಶ್ರೀ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗದವರಿಂದ ದಾಸವಾಣಿ, ಮಹಾಪೂಜೆ, 9.30ರಿಂದ ಶ್ರೀಗಳ ಪಾದಪೂಜೆ, ತುಲಾಭಾರ, ಉಯ್ಯಾಲೆ ಸೇವೆ, ಗುರುವಂದನೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಯಂಕಾಲ 6ಗಂಟೆಯಿಂದ ತುಳುವೆರೆ ತುಡರ್ ಕಲಾತಂಡ ಸುರತ್ಕಲ್ ಇವರಿಂದ ‘ಕೊಪ್ಪರಿಗೆ’ ನಾಟಕ ನಡೆಯಿತು. ರಾತ್ರಿ 7ರಿಂದ ಶ್ರೀ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ, ಬೆಳ್ಳಿ ರಥೋತ್ಸವ,ಮಹಾ ಪೂಜೆ ನಡೆಯಿತು. ಊರಪರವೂರ ನೂರಾರು ಮಂದಿ ಕಾರ್ಯಕ್ರಮಕ್ಕೆ ಆಗಮಿಸಿ, ಶ್ರೀಗಳ ಆಶೀರ್ವಾದ ಪಡೆದರು.

Related Posts

Leave a Reply

Your email address will not be published.