ಪದ್ಮಾ ಆರ್. ಶೇಟ್ ನಿಧನ
ಮಂಗಳೂರಿನ ಲೇಡಿಹಿಲ್‌ನ ಎಸ್.ಎಲ್ ಡೈಮಂಡ್ ಹೌಸ್ ಮಾಲಕರಾದ ರವೀಂದ್ರ ಶೇಟ್ ಅವರ ಅಣ್ಣ ದಿ| ಎಂ.ರಘುನಾಥ ಶೇಟ್ ಅವರ ಪತ್ನಿ ಪದ್ಮಾ ಆರ್. ಶೇಟ್(75) ನಿಧನರಾಗಿದ್ದಾರೆ.
ಪದ್ಮಾ ಆರ್. ಶೇಟ್ ಅಲ್ಪಕಾಲದ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ.
ಪದ್ಮಾ ಅವರು ದೈವಜ್ಞ ಬ್ರಾಹ್ಮಣ ಸಮುದಾಯದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಮೃತರಿಗೆ ಪ್ರಸಿದ್ಧ ಉದ್ಯಮಿಗಳಾದ ಎಂ.ಪ್ರಶಾಂತ್ ಶೇಟ್, ಎಂ. ಹೇಮಂತ್ ಶೇಟ್, ಎಂ.ನಿಶಾಂತ್ ಶೇಟ್ ಸಹಿತ ಮೂವರು ಪುತ್ರರು ಹಾಗೂ ಪುತ್ರಿ ವೀಣಾ ಡಿ. ಶೇಟ್ ಇದ್ದಾರೆ. ನಗರದ ಮಣ್ಣಗುಡ್ಡೆಯ ಗಾಂಧಿನಗರದ ಲಕ್ಷ್ಮೀಸದನದಲ್ಲಿ ನೆಲೆಸಿದ್ದರು. ಇಂದು ಬೋಳೂರಿನ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಲೇಡಿಹಿಲ್‌ನ ಎಸ್.ಎಲ್ ಡೈಮಂಡ್ ಹೌಸ್ ಮಾಲಕರಾದ ರವೀಂದ್ರ ಶೇಟ್ ಹಾಗೂ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.


















