ಸುರತ್ಕಲ್ : ಟೋಲ್ ಗು ಟೋಲ್ ಗು ಮದುವೆಯಂತೆ …!

ಮಂಗಳೂರು: ಸುರತ್ಕಲ್ ಹಾಗೂ ಹೆಜಮಾಡಿ ಟೋಲ್ ಗೇಟ್ ಗೆ ಬಿಜೆಪಿ ಸರ್ಕಾರದ ಕೃಪೆಯಿಂದ ಶುಭ ವಿವಾಹ. ಇಂತಹದ್ದೊಂದು ವಿವಾಹ ಆಮಂತ್ರಣದ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಸುರತ್ಕಲ್ ನ ಎನ್ ಐಟಿಕೆ ಬಳಿಯಿದ್ದ ಅಕ್ರಮ ಟೋಲ್ ಗೇಟ್ ಇತ್ತೀಚೆಗೆ ಸಾರ್ವಜನಿಕರ ಭಾರೀ ಆಕ್ರೋಶದ ಹಿನ್ನೆಲೆಯಲ್ಲಿ ರದ್ದಾಗಿತ್ತು. ಆದರೆ, ಇದಾದ ಬಳಿಕ ಹೆಜಮಾಡಿ ಟೋಲ್ ಗೇಟ್ ನಲ್ಲಿ ಸುರತ್ಕಲ್ ಟೋಲ್ ಗೇಟ್ ನ ಟೋಲ್ ಅನ್ನೂ ಸೇರಿಸಿ ದುಪ್ಪಟ್ಟು ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಟೋಲ್ ಗೇಟ್ ಮಾತ್ರ ರದ್ದಾಗಿದೆಯೇ ಹೊರತು ಟೋಲ್ ರದ್ದಾಗಿಲ್ಲ. ಇದರ ವಿರುದ್ಧ ಇದೀಗ ಕರಾವಳಿಯಲ್ಲಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಾರ್ವಜನಿಕರು ಸಜ್ಜಾಗಿದ್ದಾರೆ. ಇದೀಗ ಹರಿದಾಡುತ್ತಿರುವ ಮದುವೆ ಆಮಂತ್ರಣ ಪತ್ರಿಕೆ ಬಿಜೆಪಿ  ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಸ್ಥಳೀಯ ಶಾಸಕರನ್ನು ಮುಜುಗರಕ್ಕೆ ಸಿಲುಕಿಸಿದೆ.

ಆಮಂತ್ರಣ ಪತ್ರಿಕೆಯಲ್ಲಿ, ಸುರತ್ಕಲ್ ನಲ್ಲಿ ಅಕ್ರಮವಾಗಿದ್ದ ಸುರತ್ಕಲ್ ಟೋಲ್ ಗೇಟ್ ಎಂಬ ವಧುವನ್ನು ಹೆಜಮಾಡಿ ಟೋಲ್ ಗೇಟ್ ಎಂಬ ವರನೊಂದಿಗೆ ಮದುವೆಯನ್ನು ಕೇಂದ್ರ ಶ್ರೀನರೇಂದ್ರ ಮೋದಿ ಸರಕಾರದ ಹೆದ್ದಾರಿ ಪ್ರಾಧಿಕಾರ ಸಚಿವರಾದ ನಿತಿನ್ ಗಡ್ಕರಿ ಸಮ್ಮುಖದಲ್ಲಿ ನಳಿನ್ ಕುಮಾರ್ ಅವರ ಮನವಿ ಮೇರೆಗೆ ಏರ್ಪಡಿಸಲಾಗಿದೆ. ತಾವುಗಳು ಬಂದು ಸುರತ್ಕಲ್ ಮತ್ತು ಹೆಜಮಾಡಿ ಸುಂಕವನ್ನು ಒಂದೇ ಕಡೆ ಪಾವತಿಸಿ ಶುಭ ಹಾರೈಸಬೇಕಾಗಿ ವಿನಂತಿ, ‘ಉಡುಗೊರೆಯೇ ಆಶೀರ್ವಾದ’ ಶುಭ ಕೋರುವವರು ಬಿಜೆಪಿ MLAಗಳು ದಕ್ಷಿಣ ಕನ್ನಡ ಎಂದು ಬರೆಯಲಾಗಿದೆ.

Related Posts

Leave a Reply

Your email address will not be published.