ಪಡುಬಿದ್ರಿ: ಆ.24ರಂದು ಶಿವಾಯ ಫೌಂಡೇಶನ್ (ರಿ) ವತಿಯಿಂದ ವಿವಿಧ ಕಾರ್ಯಕ್ರಮಗಳು

ಶಿವಾಯ ಫೌಂಡೇಶನ್ (ರಿ) ವತಿಯಿಂದ ಕೃಷ್ಣ ಸುಧಾಮ ಸಭಾಂಗಣ ಬಂಟರ ಭವನ ಪಡುಬಿದ್ರಿಯಲ್ಲಿ ದಿನಾಂಕ 24/08/2025 ನೇ ಭಾನುವಾರದಂದು ಹಲವಾರು ಕಾರ್ಯಕ್ರಮಗಳು ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಶಿವಾಯ ಪ್ರೇರಣಾ ಪುರಸ್ಕಾರ, ಶೈಕ್ಷಣಿಕ ಸಹಾಯ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಪಡುಬಿದ್ರಿ ಬಂಟರ ಸಂಘ ಡಾ. ವೈ ಎನ್ ಶೆಟ್ಟಿ ಹಾಗೂ ಪಡುಬಿದ್ರಿ ಏಸ್ಪಿನ್ ಎಸ್ ಈ ಝೆಡ್ ಮುಖ್ಯಸ್ಥರು ಶ್ರೀ ಅಶೋಕ್ ಶೆಟ್ಟಿ ಅವರಿಗೆ ಸನ್ಮಾನ.
ಕಾರ್ಕಳ ಹೊಸ ಬೆಳಕು ಸಂಸ್ಥೆಯ ಸ್ಥಾಪಕರಾದ ತನುಲಾ ತರುಣ್ಅ ವರಿಗೆ ಶಿವಾಯ ಪ್ರೇರಣಾ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾ ರತ್ನ ಯಶೋಧರ ಎರ್ಮಾಳು ಸಾರಥ್ಯದ “ಅಬ್ಬರ” ಜಾನಪದ ನೃತ್ಯ ಕಲಾ ತಂಡ ಎರ್ಮಾಳು ಪ್ರಸ್ತುತಪಡಿಸುವ ಜಾನಪದ ನೃತ್ಯ ವೈವಿಧ್ಯ ಕಾರ್ಯಕ್ರಮ ಮನೋರಂಜನೆ ನೀಡಲಿದೆ.
ಶಿವಾಯ ಫೌಂಡೇಶನ್ನ ಗೌರವಾಧ್ಯಕ್ಷರಾದ ನವೀನ್ ಚಂದ್ರ ಜೆ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ ಬೆಳಪು
ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ) ಅಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬಟ್ಟು, ಉದ್ಯಮಿ ಬಾಲಚಂದ್ರ ಶೆಟ್ಟಿ ಪುಚ್ಚೊಟ್ಟುಬೀಡು ಎರ್ಮಾಳ್, ಪಡುಬಿದ್ರಿಯ ಹೋಟೆಲ್ ಪಲ್ಲವಿಯ ಸಂತೋಷ್ ಕುಮಾರ್ ಶೆಟ್ಟಿ ಹೆಜಮಾಡಿಯ ಪ್ರೇಮಾಲಯ ಶಾರದಾ ಡೆವಲಪರ್ಸನ ಪ್ರೇಮನಾಥ ಶೆಟ್ಟಿ, ಚಾಮರ ಫೌಂಡೇಶನ್ ಸ್ಥಾಪಕರಾದ ಮನೀಶ್ ಸಾಲ್ಯಾನ್, ,ಬಂಟರ ಸಂಘ ಪಡುಬಿದ್ರಿಯ ಯುವ ವಿಭಾಗದ ಅಧ್ಯಕ್ಷ ಸುಜಿತ್ ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯ ನವೀನ್ ಎನ್ ಶೆಟ್ಟಿ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು ಕಾರ್ಯಕ್ರಮದ ಆಗಮನಕ್ಕೆ ಸರ್ವರಿಗೂ ಶಿವಾಯ ಫೌಂಡೇಶಿನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಮತ್ತು ಸರ್ವ ಸದಸ್ಯರು ಸ್ವಾಗತ ಬಯಸಿದ್ದಾರೆ.
