ಸುಳ್ಯ.ಶಾಂತಿನಗರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ, ದೈಹಿಕ ಶಿಕ್ಷಣ ಶಿಕ್ಷಕ ರಘುನಾಥ ಶೆಟ್ಟಿ ನಿವೃತ್ತಿ

ಶಾಂತಿನಗರ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ರಘುನಾಥ ಶೆಟ್ಟಿ ಅವರು ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ಐತಪ್ಪ ಶೆಟ್ಟಿ ಮತ್ತು ಸೀತಮ್ಮ ದಂಪತಿಗಳ ಪುತ್ರ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಬರಡ್ಕ, ಇಲ್ಲಿ ಪೂರೈಸಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯದಲ್ಲಿ ಪೂರೈಸಿರುತ್ತಾರೆ ಇವರು ವಯಸ್ಸಿನಲ್ಲಿಯೇ ಕ್ರೀಡಾಕ್ಷೇತ್ರದಲ್ಲಿಗೆ ಆಕರ್ಷಿತರಾಗಿ ಶಾಲಾ ದಿನಗಳಲ್ಲಿಯೇ ಕ್ರೀಡಾಪಟುವಾಗಿದ್ದ ಇವರು ಕುಶಾಲನಗರದ ಶ್ರೀ ಸತ್ಯಸಾಯಿ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್ ನಲ್ಲಿ ಸಿಪಿಎಡ್ ತರಬೇತಿಯನ್ನು ಪಡೆದರು 1986- 87ರಲ್ಲಿ ಮತ್ತು 1987ರಿಂದ 1988ರ ವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಯ್ಕೋಳ್ಳಿ ಶಾಲೆಯಲ್ಲಿ ಗೌರವ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. 1988 – 1989 ರಿಂದ 1996 – 1997 ರವರೆಗೆ ದುಗಳಡ್ಕ ದೈಹಿಕ ಶಿಕ್ಷಣ ಶಿಕ್ಷಕರಾಗಿ ವೃತ್ತಿಯನ್ನ ಪ್ರಾರಂಭಿಸಿದರು . 1997 ಮಾರ್ಚ್ 26ರಿಂದ ಸರಕಾರಿ ಸೇವೆಗೆ ನಿಯತ್ತಿ ಗೊಂಡರು. 26 -3 -1997ರಿಂದ 16 -6 1998 ರವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾರಾಪತಿ ಕುಂದಾಪುರ ತಾಲೂಕು ಸೇವೆ ಸಲ್ಲಿಸಿ 17 -6- 1998ರಿಂದ
11.7.2002 ವರೆಗೆ ಉಭರಡ್ಕ ಮಿತ್ತೂರು ಶಾಲೆಯಲ್ಲಿ ಸೇವೆ ಸಲ್ಲಿಸಿದರು ದಿನಾಂಕ 17 -4- 2002 ರಿಂದ 31 -7 -2025 ರವರೆಗೆ. ಪ್ರಸ್ತುತ ಸರಕಾರಿ ಉನ್ನತೀಕರಿಸಿದ ಪ್ರಾರ್ಥಮಿಕ ಶಾಲೆ ಶಾಂತಿನಗರ ಇಲ್ಲಿಯವರೆಗೆ ಸುಮಾರು 35 ವರ್ಷಗಳ ಕಾಲ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ ತನ್ನ ಸೇವಾದಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳ ತರಬೇತಿ ನೀಡಿ ಪರಿಣತಿ ಹೊಂದುವಂತೆ ಮಾಡಿದ ಹೆಗ್ಗಳಿಕೆ ಇವರದ್ದು ಇವರಿಂದ ತರಬೇತಿ ಹಾಗೂ ಮಾರ್ಗದರ್ಶನ ಮಾಡಿದ ಕ್ರೀಡಾ ಕ್ಷೇತ್ರದ ಸಾಧನೆ ಮಾಡಿದ್ದಾರೆ ಅಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಒಂದು ತಿಂಗಳ ಕಾಲ ಯೋಗ ಹಾಗೂ ನೈತಿಕ ಶಿಕ್ಷಣದ ತರಬೇತಿಯನ್ನು ಪಡೆದಿರುತ್ತಾರೆ ಪ್ರತಿಯೊಂದು ಶಾಲೆಯಲ್ಲಿಯೂ ಮಕ್ಕಳಿಗೆ ಯೋಗಾಭ್ಯಾಸವನ್ನು ನಡೆಸಿಕೊಂಡು ಬಂದಿರುತ್ತಾರೆ. 1997ರಲ್ಲಿ ಭಾರತ ಸೇವಾದಳ ತರಬೇತಿಯನ್ನು ಪಡೆದು ಶಾಲೆಯ ಮಕ್ಕಳಿಗೆ ಸೇವಾದಳದ ಚಟುವಟಿಕೆಯನ್ನು ನಡೆಸಿಕೊಂಡು ಬಂದಿರುತ್ತಾರೆ. ಇವರಿಗೆ ರೋಟರಿ ಕ್ಲಬ್ ಸುಳ್ಯ ಇವರು ಕೊಡ ಮಾಡುವ ನ್ಯಾಷನಲ್ ಬಿಲ್ಡರ್ ಅವಾರ್ಡನ್ನು ನೀಡಿ ಗೌರವಿಸಿರುತ್ತಾರೆ. ಇವರು ಸುಳ್ಯ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿ ಹಾಗೂ ಅಧ್ಯಕ್ಷರಾಗಿ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ. ಇವರ ಪತ್ನಿ ಶ್ರೀಮತಿ ವಸಂತಿ ಇವರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ. ಜಾಲ್ಸೂರು ನಲ್ಲಿ ಮುಖ್ಯೋಪಾಧ್ಯಾಯನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇವರ ಸುಪುತ್ರ ಆಶಿತ್ ಶೆಟ್ಟಿ ಯು ಆರ್ ಇವರು ಪುತ್ತೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Related Posts

Leave a Reply

Your email address will not be published.