ಪಿರ್ಕಿಲು ತುಳು ಸಿನಿಮಾ ಯಶಸ್ವಿ ಪ್ರದರ್ಶನ

ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಎಚ್.ಡಿ. ಆರ್ಯ ನಿರ್ದೇಶನದಲ್ಲಿ ತಯಾರಾದ `ಪಿರ್ಕಿಲು’ ತುಳು ಸಿನಿಮಾ ಕರಾವಳಿಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಮಂಗಳೂರು, ಪಡುಬಿದ್ರಿ, ಉಡುಪಿ, ಕಾರ್ಕಳ ಮತ್ತು ಪುತ್ತೂರಿನ ಚಿತ್ರ ಮಂದಿರದಲ್ಲಿ ಪಿರ್ಕಿಲು ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸತೀಶ್ ಪೆರ್ನೆ ಹಾಗೂ ಶಿವಪ್ರಸಾದ್ ಇಜ್ಜಾವು ನಿರ್ಮಾಣದಲ್ಲಿ ತಯಾರಾದ ಈ ಸಿನಿಮಾ ಹಾಸ್ಯಭರಿತ ಕೌಟುಂಬಿಕ ಕತೆಯ ಎಳೆಯನ್ನು ಹೊಂದಿದೆ.

ತಾರಾ ಬಳಗದಲ್ಲಿ ಚಿತ್ರದ ನಾಯಕರಾಗಿ ವರ್ಧನ್ ಮತ್ತು ಸುದೇಶ್, ನಾಯಕಿಯಾಗಿ ಸಲೋಮಿ ಡಿಸೋಜ, ಲತಾ ಅಭಿನಯಿಸಿದ್ದಾರೆ. ತುಳು ಸಿನಿಮಾದ ದಿಗ್ಗಜರಾದ ವಿಂದ ಬೋಳಾರ್, ಬೋಜರಾಜ ವಾಮಂಜೂರು, ದೀಪಕ್ ರೈ ಪಾಣಾಜೆ, ರವಿ ರಾಮಕುಂಜ, ಸುಮಿತ್ರ ರೈ, ಅಮಿತಾ, ನವೀನ್ ಬೋಂದೇಲ್, ಅರ್ಪಣ್, ಅನಿಲ್ ರೈ, ರಂಜಿತ್ ರೈ, ತಿಮ್ಮಪ್ಪ ಕುಲಾಲ್, ಪ್ರಭಾಕರ ಶೆಟ್ಟಿ, ಮೊಹನ್, ಸೋನಿ ಅಭಿನಯಿಸಿದ್ದಾರೆ.

ಒಟ್ಟಿನಲ್ಲಿ ಪಿರ್ಕಿಲು ಸಿನಿಮಾ ಹಾಸ್ಯದೊಂದಿಗೆ ಉತ್ತಮ ಕಥಾ ಹಂದರವನ್ನು ಹೊಂದಿದ್ದು, ಕರಾವಳಿಯಾದ್ಯಂತ ಸಿನಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಸಿನಿಮಾದ ಬಗ್ಗೆ ಸಿನಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಿನಿಮಾ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

Related Posts

Leave a Reply

Your email address will not be published.