ಕಲ್ಲಬೆಟ್ಟುವಿನಲ್ಲಿ ಪೋಲಿಯೋ ಲಸಿಕಾ ಅಭಿಯಾನ

ಮೂಡುಬಿದಿರೆ : ಪೋಲಿಯೋ ದಿನದ ಅಂಗವಾಗಿ ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಶಾಲೆ ಮತ್ತು “ನಮ್ಮ ಕ್ಲಿನಿಕ್”ನಲ್ಲಿ ಐದು ವಷ೯ದೊಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆಯನ್ನು ಹಾಕಲಾಯಿತು.
ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್ ಅವರು ಎರಡೂ ಕಡೆಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಕಾಯ೯ಕ್ರಮಕ್ಕೆ ಚಾಲನೆಯನ್ನು ನೀಡಿ ಶುಭ ಹಾರೈಸಿದರು.
ಕಲ್ಲಬೆಟ್ಟುವಿನ ಸಮುದಾಯ ಆರೋಗ್ಯಾಧಿಕಾರಿ ಸೋಮನಾಥ್, ಪ್ರಾಥಮಿಕ ಆರೋಗ್ಯಾಧಿಕಾರಿ ಹಷಿ೯ತಾ, ಕಲ್ಲಬೆಟ್ಟು ಅಂಗನವಾಡಿ ಕಾಯ೯ಕತೆ೯ ರೇಖಾ, ನೀರಲ್ಕೆ ಅಂಗನವಾಡಿ ಕೇಂದ್ರದ ಕಾಯ೯ಕತೆ೯ ಶಕುಂತಳಾ, ನಮ್ಮ ಕ್ಲಿನಿಕ್ ನ ಡಾ. ಕಿರಣ್ ಲೋಬೋ, ಸ್ಟಾಪ್ ನಸ್೯ ಪುನೀತಾ ಹಾಗೂ ಲ್ಯಾಬ್ ಟೆಕ್ನೀಷಿಯನ್ ಸೌಜನ್ಯ ಮತ್ತಿತರರು ಈ ಸಂದಭ೯ದಲ್ಲಿದ್ದರು.

Related Posts

Leave a Reply

Your email address will not be published.