ಕ್ಷುಲ್ಲಕ ಕಾರಣಕ್ಕೆ ಸಹೋದರನ ಕೊಲೆ
ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಬಳಿ ನ್ಯೂ ಲೈಫ್ ಫಿಲಾಶಿಪ್ ಚರ್ಚ್ ಹತ್ತಿರದ ಸೈಟ್ನಲ್ಲಿ ಗಾರೆ ಕೆಲಸ ಮಾಡುವ ನಿಂಗಪ್ಪ ಗೌಡ ಮತ್ತು ಮಹಾದೇವ ಎಂಬ ಸಹೋದರ ನಡುವೆ ಕ್ಷುಲ್ಲಕ್ಕ ಕಾರಣಕ್ಕೆ ಗಲಾಟೆ ನಡೆದಿದ್ದು, ಮಹಾದೇವ ಎಂಬುವವರು ಮೃತಪಟ್ಟಿದ್ದಾರೆ
ನಿಂಗಪ್ಪ ಎಂಬುವನು ಮಹಾದೇವನಿಗೆ ಕಬ್ಬಿಣದ ರಾಡಿನಿಂದ ತಲೆಗೆ ಮತ್ತು ಮೈಯಿಗೆ ಬಲವಾಗಿ ಹೊಡೆದು ಹಲ್ಲೆಗೊಳಿಸಿ , ಅಲ್ಲಿಂದ ನಿಂಗಪ್ಪ ಗೌಡನು ಓಡಿ ಹೋಗಿದ್ದು , ಗಾಯಗೊಂಡ ಮಹದೇವನನ್ನು ಪುತ್ತೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ,ವೈದ್ಯರು ಪರೀಕ್ಷಿಸಲಾಗಿ ಮೃತಪಟ್ಟಿರುವದಾಗಿ ಖಚಿತಪಡಿಸಿರುತ್ತಾರೆ. ಅದರಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಆರೋಪಿ ಇರುವ ಬಗ್ಗೆ ಮಾಹಿತಿ ಖಚಿತಪಡಿಸಿ ಹಾವೇರಿ ಜಿಲ್ಲೆಯ ಕನಕಾಪುರ ಎಂಬಲ್ಲಿ ಯಿಂದ ಆರೋಪಿ ನಿಂಗಪ್ಪ ಗೌಡ ನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.



















