ಅಮಿತ್ ಶಾ ಆಗಮನ ಹಿನ್ನಲೆ : ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ ಚಪ್ಪರಮುಹೂರ್ತ

ಪುತ್ತೂರಿನಲ್ಲಿ ಫೆ.10 ರಿಂದ ನಡೆಯುವ ಕೃಷಿಯಂತ್ರ ಮೇಳ ಹಾಗೂ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವಕ್ಕೆ ಅಮಿತ್ ಶಾ ಭೇಟಿ ಹಿನ್ನಲೆಯಲ್ಲಿ ಸಭಾ ಕಾರ್ಯಕ್ರಮ ನಡೆಯುವ ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ ಸಭಾ ಕಾರ್ಯಕ್ರಮ ವೇದಿಕೆಗೆ ಗುದ್ದಲಿಪೂಜೆ ಚಪ್ಪರ ಮುಹೂರ್ತ ಸೋಮವಾರ ನಡೆಯಿತು. ಪುತ್ತೂರು ಶಾಸಕಸಂಜಿವ ಮಠಂದೂರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮಪ್ಪ ಶೆಟ್ಟಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಗನಿವಾಸ್ ರಾವ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸಜಾ ರಾಧಾಕೃಷ್ಣ ಆಳ್ವ, ಅಚ್ಚುತ ನಾಯಕ್, ಚಂದ್ರಶೇಖರ ರಾವ್ ಬಪ್ಪಳಿಗೆ, ಯುವರಾಜ್ ಪೆರಿಯತೋಡಿ, ರಾಧಾಕೃಷ್ಣ ಬೋರ್ಕರ್, ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು.
