ಪುತ್ತೂರು:ಕಾರು – ರಿಕ್ಷಾ ನಡುವೆ ಭೀಕರ ಅಪಘಾತ:ಬಾಲಕಿ ಮೃತ್ಯು

ಪುತ್ತೂರು: ಕುಂಬ್ರ ಸಮೀಪದ ಪರ್ಪುಂಜ ಕೊಯಿಲತ್ತಡ್ಕ ಅಬೋಡ್ ಹಾಲ್ ಬಳಿ ನವೆಂಬರ್ 1ರಂದು ಸಂಜೆ ಈ ಕಾರು ಹಾಗೂ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದು ಬಾಲಕಿ ದುರ್ಮರಣ ಹೊಂದಿದ್ದಾಳೆ.

ಪುತ್ತೂರುನಿಂದ ಕುಟುಂಬ ಸಹಿತ ತಿಂಗಳಾಡಿ ಕಡೆಗೆ ತೆರಳುತ್ತಿದ್ದ ರಿಕ್ಷಾ, ಸುಳ್ಯ ದಿಕ್ಕಿನಿಂದ ಪುತ್ತೂರಿನತ್ತ ಬರುತ್ತಿದ್ದ ಕಾರು ತೀರಾ ವಿರುದ್ಧ ದಿಕ್ಕಿನಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

ಕಾರು ಚಾಲಕನಾದ ಕುಂಬ್ರದ ಬರೋಡ ಬ್ಯಾಂಕ್ ಉದ್ಯೋಗಿ, ಬಸ್ ಅನ್ನು ಓವರ್‌ಟೇಕ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಎದುರಿನಿಂದ ಬಂದ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾರೆ.

ಅಪಘಾತದಲ್ಲಿ ರಿಕ್ಷಾ ಚಾಲಕ ಹನೀಫ್ ಬನ್ನೂರು ಅವರ ಆರು ವರ್ಷದ ಮಗಳು ಶಜ್ವಾ ಫಾತಿಮಾ ಮೃತಪಟ್ಟಿದ್ದಾಳೆ.ಹನೀಫ್ ರವರ ಪತ್ನಿ, ಅತ್ತೆ ಮತ್ತು 2 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸ್ಥಳಾಂತರಿಸಲಾಗಿದೆ.

ಗಾಯಗೊಂಡವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಒಳಮೊಗರು ಗ್ರಾಮದ ಪರ್ಪುಂಜ ಅಬ್ರಾಡ್ ಹಾಲ್ ಬಳಿ ಕಾರು ಹಾಗೂ ಅಟೋ ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೊಳ್ವಾ‌ರ್ ಕಾಪಿಕಾಡ್ ನಿವಾಸಿ ಝುಲೈಕಾ ಹಾಗೂ ಅವರ ಮೊಮ್ಮಗಳು ಶಾಝಾ ಫಾತಿಮಾ ಮೃತಪಟ್ಟಿದ್ದಾರೆ.

ಪಿರ್ಯಾದುದಾರರಾದ ಬನ್ನೂರು ನಿವಾಸಿ ಹನೀಫ್ ರವರು ನೀಡಿದ ದೂರಿನ ಪ್ರಕಾರ, ໖ 01.11.2025 0 ಸುಮಾರು 4.15ಕ್ಕೆ ತಮ್ಮ ಕುಟುಂಬದವರಾದ ಪತ್ನಿ, ಅತ್ತೆ, ಭಾವನ ಹೆಂಡತಿ ಹಾಗೂ ಮೂವರು ಮಕ್ಕಳೊಂದಿಗೆ KA-21-C-3491 ನಂಬರಿನ ಅಟೋ ರಿಕ್ಷಾದಲ್ಲಿ ಬೊಳ್ಳಾರಿಯಿಂದ ಪುತ್ತೂರಿನತ್ತ ಹೊರಟು ಬಂದಾಗ, ಎದುರಿನಿಂದ w TN-72-BL-1759 2 ಚಾಲಕ ಲಕ್ಷ್ಮಿಬದಿರಾಜು ಅವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ತಪ್ಪು ಬದಿಯಲ್ಲಿ ಕಾರು ಓಡಿಸಿ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾರೆ.

ಪರಿಣಾಮವಾಗಿ ರಿಕ್ಷಾ ಉರುಳಿ ಬಿದ್ದು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಘಟನೆಯಲ್ಲಿ ಹನೀಫ್ ರವರ ಮಗಳು ಶಾಝಾ ಫಾತಿಮಾ (6) ಸ್ಥಳದಲ್ಲೇ ಮೃತಪಟ್ಟಿದ್ದು, ಬೊಳ್ವಾ‌ರ್ ಕಾಪಿಕಾಡ್ ನಿವಾಸಿ ಹಾಗೂ ಭಾರತ್ ಬೀಡಿ ಕಂಪನಿಯ ಉದ್ಯೋಗಿ ಅಬ್ದುಲ್ಲಾ ಕುಂಞ ರವರ ಪತ್ನಿ ಝುಲೈಕಾ (ಪುತ್ತೂರು RTO ಕಛೇರಿಯ ಉದ್ಯೋಗಿ ಜಬ್ಬಾರ್, ಗಲ್ಫ್ ಉದ್ಯೋಗಿ ರಿಯಾಝ್ ಹಾಗೂ ಇಟ್ಬಾಲ್ ರವರ ತಾಯಿ) ಮಂಗಳೂರಿನ KMC ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಈವಾಗ ನಿಧನರಾದರು.

ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಲಂ 281, 125(a), 125(b), 106 2.2.2. 2023 ರಂತೆ ತನಿಖೆ ನಡೆಯುತ್ತಿದೆ.

Related Posts

Leave a Reply

Your email address will not be published.