ಪುತ್ತೂರು: ಅಯೋಧ್ಯೆಯ ಅಕ್ಷತೆ, ಉಪವಸತಿ ಕೇಂದ್ರದಲ್ಲಿ ವಿತರಣೆ
ಪುತ್ತೂರು: ಶ್ರೀ ರಾಮಜನ್ಮಭೂಮಿ ಆಯೋಧ್ಯೆಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಯನ್ನು ಪುತ್ತೂರು ನಗರದಿಂದ ಉಪವಸತಿ ಕೇಂದ್ರಕ್ಕೆ ವಿತರಿಸುವ ಕಾರ್ಯಕ್ರಮ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆವರಣದಲ್ಲಿ ನಡೆಯಿತು.
ಪುತ್ತೂರಿನ 45 ಉಪವಸತಿ ಕೇಂದ್ರದ ಪ್ರಮುಖರಿಗೆ ಪವಿತ್ರ ಅಕ್ಷತೆಯನ್ನು ಗುರುಪುರ ವಜ್ರದೇಹಿ ಮಠದ ರಾಜಶೇಖರನಂದ ಸ್ವಾಮಿಜೀಯವರು ವಿತರಿಸಿದರು.ಪುತ್ತೂರು ನಗರದಿಂದ 45 ಉಪವಸತಿ ಕೇಂದ್ರಗಳ ಪ್ರಮುಖರಿಗೆ ರಾಜಶೇಖರಾನಂದ ಸ್ವಾಮಿಜಿಯವರು ಅಕ್ಷತೆ ತುಂಬಿದ ಕಲಶವನ್ನು ವಿತರಿಸಿದರು.